
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸೀಸನ್ 1,2ರ ರನ್ನರ್ ಅಪ್ ಡೆಲ್ಲಿ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೇರಿದೆ. ಗುಜರಾತ್ ವಿರುದ್ದ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ (44), ಜೆಸ್ ಜೊನಾಸ್ಸೆನ್ (52) ಇಬ್ಬರ ಬ್ಯಾಟೀಮಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಜಯ ಸಾಧಿಸಿತ್ತು. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 127 ರನ್ಗಳಷ್ಟೇ ಕಲೆ ಹಾಕಿದರು. ಆರಂಭದಲೇ 4 ವಿಕೆಟ್ ಕಳೆದುಕೊಂಡಿತು. ಉಳಿದ ಬ್ಯಾಟ್ಸಮನ್ಗಳು ಯಾರು ಕೂಡ ಹೆಚ್ಚು ಹೊತ್ತು ಕ್ರೀಸಿನಲ್ಲಿ ಇರಲಿಲ್ಲ. ಭಾರತಿ ಪುಲ್ಮಾಲಿ (40) ಅಂತಿಮದಲ್ಲಿ ಅವರ ಹೋರಾಟದಿಂದ ಗುಜರಾತ್ ಸಾಧಾರಣ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತ್ತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಡೆಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ತಂಡದ ಪರ ನಾಯಕಿ ಮೆಗ್ ಲ್ಯಾನಿಂಗ್ (3), ಬೇಗನೇ ಔಟ್ ಆದರೆ, ಶಫಾಲಿ ವರ್ಮಾ, ,ಜೆಸ್ ಜೊನಾಸ್ಸೆನ್ ಉತ್ತಮ ಜೊತೆಯಾಟದಿಂದ ಡೆಲ್ಲಿ ಗುರಿಯನ್ನು ಸುಲಭವಾಗಿ ಚೇಸ್ ಮಾಡಿತು.

ಅಭಿಷೇಕ್ .ಎಸ್