
ವುಮೆನ್ಸ್ ಪ್ರೀಮಿಯರ್ ಸೀಸನ್ 3ರಲ್ಲಿ ಆರ್ಸಿಬಿಗೆ ಸತತ 4 ಸೋಲು ಎದುರಾಗಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ (8), ವ್ಯಾಟ್ ಹಾಡ್ಜ್ (21) ಬೇಗನೇ ಔಟ್ ಆದರು. ನಂತರ ಕ್ರೀಸಿಗಳಿದ ಆರ್ಸಿಬಿ ನಂಬಿಕಸ್ತ ಬ್ಯಾಟಿಂಗ್ ತಾರೆ ಎಲ್ಲಿಸ್ ಪೆರ್ರಿ (60), ರಾಘ್ವಿ ಬಿಸ್ಟ್ (33) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತ್ತು. ಗೆಲ್ಲಲ್ಲು 148 ರನ್ ಟಾರ್ಗೆಟ್ ಪಡೆದ ಡೆಲ್ಲಿ ಆರಂಭಿಕದಲೇ ನಾಯಕಿ ಮೆಗ್ ಲ್ಯಾನಿಂಗ್ (2) ಅವರ ವಿಕೆಟ್ ಕಳೆದುಕೊಂಡಿತ್ತು. ಶಫಾಲಿ ಶರ್ಮಾ ಜೊತೆ ಕೂಡಿಕೊಂಡಜೆಸ್ ಜೊನಾಸೆನ್ 77 ಎಸೆತಗಳಲ್ಲಿ 144 ರನ್ಗಳ ಜೊತೆಯಾಟ ಆಡಿ ತಂಡವನ್ನು ಗೆಲ್ಲುವಿನ ದಡ ಮುಟ್ಟಿಸಿದರು. ಶಫಾಲಿ ಶರ್ಮಾ (80), ಜೆಸ್ ಜೊನಾಸೆನ್ (61) ರನ್ ಗಳಿಸಿ ಟೂರ್ನಿಯಲ್ಲಿ ಡೆಲ್ಲಿಗೆ 5 ವಿಜಯ ದಕ್ಕಿಸಿಕೊಟ್ಟರು. ಆರ್ಸಿಬಿ 6 ಪಂದ್ಯಗಳಿಂದ 2ರಲ್ಲಿ ಗೆದ್ದು 4ರಲ್ಲಿ ಸೋಲುಂಡು ಪಾಯಿಂಟ್ಸ್ ಟೇಬಲ್ನಲ್ಲಿ 4 ಸ್ಥಾನದಲ್ಲಿದೆ.

ಅಭಿಷೇಕ್.ಎಸ್