
ಬಹುನಿರೀಕ್ಷಿತ ಸೀಸನ್ 18ರ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಸಿಕ್ಕಿದೆ. ಕಳೆದ ಬಾರಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಆಯ್ಕೆಯಾಗಿದ್ದಾರೆ. ತಂಡದ ನಾಯಕತ್ವ ಕುರಿತು ಫ್ರಾಂಚೈಸಿ ಅಧಿಕೃತವಾಗಿ ರಹಾನೆ ಅವರನ್ನ ನಾಯಕರಾಗಿ ಆಯ್ಕೆ ಮಾಡಿರುವುದನ್ನು ತಿಳಿಸಿದೆ. ಅಜಿಂಕ್ಯ ರಹಾನೆ ಐಪಿಎಲ್ನಲ್ಲಿ ಹಿರಿಯ ಹಾಗೂ ನಾಯಕನ್ನಾಗಿ ಅನುಭವ ಹೊಂದಿದ್ದು ಈ ಹಿಂದೆ ಸೀಸನ್ 1ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ನಾಯಕರಾಗಿ ಹಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ ಅನುಭವವಿದೆ. ಐಪಿಎಲ್ನಲ್ಲಿ 185 ಪಂದ್ಯಗಳಿಂದ 4642 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ, ಹಾಗೂ 30 ಅರ್ಧ ಶತಕವನ್ನು ಸಿಡಿಸಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಗಾಗಿ ಕೆಕೆಆರ್ ತನ್ನ ಕೋರ್ ಟೀಂ ಅನ್ನೇ ಬಹುತೇಕವಾಗಿ ಉಳಿಸಿಕೊಂಡಿದೆ. ಮಾರ್ಚ್ 22ರಿಂದ ಐಪಿಎಲ್ ಟೂರ್ನಿ ಪ್ರಾರಂಭವಾಗಲಿದೆ.

ಅಭಿಷೇಕ್.ಎಸ್