
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ 3ರಲ್ಲಿ ಗುಜರಾತ್ ಜೈಂಟ್ಸ್ ಸೆಮಿಫೈನಲ್ ಆಸೆ ಜೀವಂತವಾಗಿದೆ. ಟೂರ್ನಿಯಲ್ಲಿ 3 ಸೋಲುಗಳಿಂದ ಕಂಗೆಟ್ಟಿದ ಗುಜರಾತ್ ತಂಡ ಮುಂದಿನ ಹಂತಕ್ಕೆ ಹೋಗಬೇಕಾದರೆ ಬಾಕಿ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಗುಜರಾತ್ ಯು.ಪಿ ವಾರಿಯರ್ಸ್ ವಿರುದ್ದ ಗೆದ್ದು ಸೆಮಿಫೈನಲ್ ರೇಸ್ನಲ್ಲಿ ಉಳಿದಿದೆ. ಟಾಸ್ ಗೆದ್ದ ಯು.ಪಿ ವಾರಿಯರ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಗುಜರಾತ್ ಪರ ಇನ್ನಿಂಗ್ಸ್ ಆರಂಭಿಸಿದ ಬೆತ್ ಮೂನಿ(96), 4 ರನ್ನಿಂದ ಶತಕ ವಂಚಿರಾದರೆ, ಹರ್ಲೀನ್ ಡಿಯೋಲ್(45) ಅರ್ಧ ಶತಕದಿಂದ ವಂಚಿರಾದರು. ಆದರೆ ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಗುಜರಾತ್ 20 ಓವರ್ಗಳಲ್ಲಿ 186 ರನ್ ಕಲೆ ಹಾಕಿತ್ತು. 187 ರನ್ಗಳ ಬೃಹತ್ ಗುರಿ ಪಡೆದ ಯು.ಪಿ ವಾರಿಯರ್ಸ್ ಆರಂಭದಿಂದಲ್ಲೇ ವಿಕೆಟ್ ಕಳೆದುಕೊಂಡಿತ್ತು. ಯಾವುಬ್ಬ ಬ್ಯಾಟರ್ಗಳು ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲ್ಲು ಸಾಧ್ಯವಾಗಲಿಲ್ಲ. ಚಿನೆಲ್ಲೆ ಹೆನ್ರಿ (28) ರನ್ ತಂಡ ಪರ ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಅಂತಿಮವಾಗಿ ಗುಜರಾತ್ ಬೌಲರ್ಗಳ ಬಿಗುವಿನ ಬೌಲಿಂಗ್ಗೆ ಯು.ಪಿ ವಾರಿಯರ್ಸ್ ತಂಡ ಕೇವಲ 105 ರನ್ಗಳಿಗೆ ಅಲೌಟ್ ಆಗಿ ಸೋಲು ಒಪ್ಪಿಕೊಂಡಿತ್ತು.
=========================================================================

ಅಭಿಷೇಕ್.ಎಸ್