
ಚಾಂಪಿಯನ್ಸ್ ಟ್ರೋಫಿ ಸೀಸನ್9ರ 2ನೇ ಸೆಮಿಪೈನಲ್ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ. ಟೂರ್ನಿಯ ಇತಿಹಾಸದಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಒಂದು ಬಾರಿ ಚಾಂಪಿಯನ್ ಆಗಿವೆ. 1998ರಲ್ಲಿ ದಕ್ಷಿಣ ಆಫ್ರಿಕಾ ಟ್ರೋಫಿ ಗೆದ್ದರೆ, 2000ರಲ್ಲಿ ನ್ಯೂಜಿಲೆಂಡ್ ತಂಡ ಚಾಂಪಿಯನ್ ಆಗಿದೆ. ದಕ್ಷಿಣ ಆಫ್ರಿಕಾ ಮಾತ್ರ 1998ರಿಂದ ಚೋಕರ್ಸ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಗಿದ್ದು ಬಿಟ್ಟರೆ ತಂಡದ ಉಳಿದ ಆವೃತ್ತಿಗಳಲ್ಲಿ ತಂಡದ ಪ್ರದರ್ಶನ ಸಾಧಾರಣವಾಗಿದೆ. ಇಲ್ಲಿವರೆಗೆ 4 ಬಾರಿಗೆ ಸೆಮಿಫೈನಲ್ ತಲುಪಿದ್ದು 4ರಲ್ಲಿಯೂ ಸೋತಿದೆ. 2024ರ ಟಿ20 ವಿಶ್ವಕಪ್ ಫೈನಲ್ನಲ್ಲಿಯೂ ದಕ್ಷಿಣ ಆಫ್ರಿಕಾ ಸೋತಿತ್ತು. ಇತ್ತ ನ್ಯೂಜಿಲೆಂಡ್ ಕೂಡ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ಎದರು ನೋಡುತ್ತಿದೆ. 2015,2019 ಏಕದಿನ ವಿಶ್ವಕಪ್,2021ರ ಟಿ20 ವಿಶ್ವಕಪ್ ಪೈನಲ್ನಲ್ಲಿ ಸೋತಿದೆ. ಈ ಬಾರಿ ಟೂರ್ನಿಯಲ್ಲಿ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಕಿವೀಸ್ ತಂಡ ಆಡಿದ 3 ಪಂದ್ಯಗಳನ ಪೈಕಿ 2ರಲ್ಲಿ ಗೆದ್ದು 1 ರಲ್ಲಿ ಸೋತು 2ನೇ ಸ್ಥಾನಿಯಾಗಿ ಸೆಮಿಫೈನಲ್ಗೆ ಎಂಟ್ರಿ ನೀಡಿದೆ.
ಪಿಚ್ ರಿಪೋರ್ಟ್
ಲಾಹೋರ್ ಕ್ರೀಡಾಂಗಣದಲ್ಲಿ ಪಿಚ್ ಬ್ಯಾಟಿಂಗ್ಗೆ ಸಹಾಯಕವಾಗಲಿದೆ. ದೊಡ್ಡ ಮೊತ್ತ ಕಲೆಹಾಕಿದ ಉದಾಹರಣೆಗಳಿವೆ. ಇಲ್ಲಿ ನಡೆದ ಲೀಗ್ ಪಂದ್ಯಗಳಲ್ಲಿನ 4 ಇನ್ನಿಂಗ್ಸ್ ಕೂಡ 300+ ರನ್ಗಳು ದಾಖಲಾಗಿವೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು…

ಅಭಿಷೇಕ್. ಎಸ್