
ಐಪಿಎಲ್ ಸೀಸನ್ 18ರಲ್ಲಿ ಆಟಗಾರರಿಗೆ ಬಿಸಿಸಿಸಿಐ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಟ್ಟದಲ್ಲಿ ಬಿಸಿಸಿಐ ಆಟಗಾರರಿಗೆ ಕೆಲವು ನಿಯಮಗಳನ್ನು ಜಾರಿಗೊಳಿಸಿತ್ತು. ಆದಾದ ಬಳಿಕ ಇದೀಗ ಐಪಿಎಲ್ನಲ್ಲೂ ಕೂಡ ಕಠಿಣ ನಿಯಮ ಜಾರಿಗೊಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಫೆ.18ರಂದು ನಡೆದ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜೊತೆಗೆ ಎಲ್ಲ 10 ಫ್ರಾಂಚೈಸಿಗಳಿಗೆ ಇಮೇಲ್ ಮೂಲಕ ಮಾಹಿತಿಯನ್ನು ಕಳುಹಿಸಲಾಗಿದೆ. ಬಿಸಿಸಿಐನ ನಿಯಮಗಳ ಪ್ರಕಾರಐಪಿಎಲ್ ವೇಳೆ ಆಟಗಾರರು ಇರುವ ಸ್ಥಳ ಅಥವಾ ಡ್ರೆಸ್ಸಿಂಗ್ ರೂಮ್ಗೆ ಕುಟುಂಬಸ್ಥರಿಗೆ ನಿಷೇಧ ಹೇರಲಾಗಿದೆ. ಆಟಗಾರರೆಲ್ಲರೂ ಒಟ್ಟಿಗೆ ತಂಡದ ಬಸ್ನಲೇ ಸಂಚರಿಸಬೇಕು. ಪ್ರೆಸೆಂಟೇಶನ್ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ. ಪ್ರಮುಖವಾಗಿ ಆಟಗಾರನೊಬ್ಬ ಯಾವುದೇ ಜೆರ್ಸಿಯ ಸಂಖ್ಯೆಯನ್ನು ಬದಲಾಯಿಸಬೇಕೆಂದರೆ 24 ಗಂಟೆ ಮುಂಚೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿರಬೇಕು ಎಂಬ ನಿಯಮಗಳನ್ನು ಬಿಸಿಸಿಐ ಹೊಸ ನಿಯಮದಲ್ಲಿ ನಮೂದಿಸಿದೆ…..

ಅಭಿಷೇಕ್.ಎಸ್