
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸೆಮಿಪೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮಣಿಸಿ ಭಾರತ ಫೈನಲ್ ತಲುಪಿದೆ. ಆ ಮೂಲಕ 5ನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಭಾರತ ಪೈಪೋಟಿ ನಡೆಸಲಿದೆ. ಇದರ ನಡುವೆ ಆಸ್ಟ್ರೇಲಿಯಾ ವಿರುದ್ದ ಗೆದ್ದ ಟೀಂ ಇಂಡಿಯಾ ಆಟಗಾರರು ಸಖತ್ ಜೋಶ್ನಲ್ಲಿಯೇ ವಿನ್ನಿಂಗ್ ಸೆಲೆಬ್ರೇಶನ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ಗೆಲುವನ್ನು ಸಂಭ್ರಮಿಸಿದ್ದು ಡ್ರೆಸ್ಸಿಂಗ್ ರೂಮ್ನಿಂದ ಪತ್ನಿ ಕಡೆ ತೆರಳಿದ ವಿರಾಟ್ ಅನುಷ್ಖಾ ಜೊತೆ ಗೆಲುವಿನ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. 2015ರ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದರು. ಆಗ ಪತ್ನಿ ಅನುಷ್ಕಾ ಬಹಳ ಟೀಕೆ ಒಳಗಾಗಿದ್ದರು. ಸದ್ಯಕ್ಕೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋಲಿಲ್ಲದ ಸರದಾರನ್ನಾಗಿ ಭಾರತ ತಂಡ ಫೈನಲ್ಗೆ ಲಗ್ಗೆ ಇಟ್ಟಿದ್ದು, ಮಾರ್ಚ್9 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಅಭಿಷೇಕ್. ಎಸ್