
ಮಾರ್ಚ್ 9 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪೈನಲ್ ಪಂದ್ಯಕ್ಕೆ ಎಲ್ಲ ಟಿಕೆಟ್ಗಳು ಸೋಲ್ಡೌಟ್ ಆಗಿವೆ. ಈ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಈ ಹೈ ವೋಲ್ಟೆಜ್ ಪಂದ್ಯದ ಟಿಕೆಟ್ ಕೇವಲ 2 ಗಂಟೆಗಳಲ್ಲಿ ಎಲ್ಲ ಟಿಕೆಟ್ಗಳು ಮಾರಾಟವಾಗಿವೆ. ಮಂಗಳವಾರದಂದು ಐಸಿಸಿ ಟಿಕೆಟ್ ಮಾರಾಟಕ್ಕೆ ಇಟ್ಟಿತ್ತು. ಒಂದು ಟಿಕೆಟ್ ಕನಿಷ್ಠ (5,925) ಹಾಗೂ ಗರಿಷ್ಠ ( 2ಲಕ್ಷ 84 ಸಾವಿರ ) ಬೆಲೆಗಳನ್ನು ನಿಗದಿನ ಮಾಡಲಾಗಿತ್ತು. ಆದರೆ ಟಿಕೆಟ್ ಮಾರಾಟಕ್ಕೆ ಇಟ್ಟ 2 ಗಂಟೆಗಳಲ್ಲಿಯೇ ವೆಬ್ಸೈಟ್ಗಳಲ್ಲಿ ಎಲ್ಲ ಟಿಕೆಟ್ಗಳು ಸೇಲ್ ಆಗಿವೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 25000 ಆಸನ ಸಾಮರ್ಥ್ಯ ಹೊಂದಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಫೆಬ್ರವರಿ 19ರಿಂದ ಸೆಣಸಾಟ ನಡೆಸಿದ್ದವು. ಅದರಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮಾತ್ರ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಮಾರ್ಚ್ 9 ರಂದು ಬಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ…

ಅಭಿಷೇಕ್.ಎಸ್