
2 ದಿನಗಳ ಬಳಿಕ ವುಮೆನ್ಸ್ ಪ್ರೀಮಿಯರ್ ಸೀಸನ್ 3 ಪುನಾರಂಭವಾಗಿದೆ. ಇಂದು ಸೀಸನ್1ರ ಚಾಂಪಿಯನ್ಸ್ ಮುಂಬೈ ಹಾಗೂ ಯುಪಿ ವಾರಿಯರ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯ ಲಖನೌ ಕ್ರೀಡಾಂಗಣದಲ್ಲಿ ನಡೆಯಲಿದ್ದು ಉಭಯ ತಂಡಗಳಿಗೂ ಜಯದ ಅವಶ್ಯಕತೆಯಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ 3 ಸ್ಥಾನದಲ್ಲಿದ್ದು ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತಿದೆ. ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಡಬೇಕಾದರೆ ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಮತ್ತೊಂದು ಕಡೆ ದೀಪ್ತಿ ಶರ್ಮಾ ನಾಯಕತ್ವದ ಯು.ಪಿ ವಾರಿಯರ್ಸ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನದಲ್ಲಿದ್ದು ಆಡಿದ 6 ಪಂದ್ಯಗಳಿಂದ 4ರಲ್ಲಿ ಸೋತಿದ್ದು ಕೇವಲ ಎರಡು ಪಂದ್ಯದಲ್ಲಿ ಗೆದ್ದಿದೆ. ಯು.ಪಿ ವಾರಿಯರ್ಸ್ ಉಳಿದ ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಕೂಡ ನಾಕೌಟ್ ರೇಸ್ನಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ಮುಂಬೈ ತಂಡಕ್ಕಿಂತಲೂ ಯು.ಪಿ.ವಾರಿಯರ್ಸ್ ತಂಡಕ್ಕೆ ಗೆಲ್ಲುವ ಅವಶ್ಯಕತೆ ಹೆಚ್ಚಿದೆ…

ಅಭಿಷೇಕ್.ಎಸ್