
2025ರ ಐಪಿಎಲ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಎಲ್ಲ ತಂಡಗಳು ಅಭ್ಯಾಸ ಶಿಬಿರಗಳನ್ನು ಆರಂಭಿಸಿವೆ. ಕೆಲ ಆಟಗಾರರು ಇದಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮಧ್ಯೆ ಆರ್ಸಿಬಿ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಮೆಗಾ ಹರಾಜಿನಲ್ಲಿ 2.6 ಕೋಟಿ ನೀಡಿ ಖರೀದಿ ಮಾಡಿದ ಇಂಗ್ಲೆಂಡ್ ತಂಡದ ಯುವ ಅಲೌಂಡರ್ ಜಾಕೋಬ್ ಬೆಥೆಲ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆರ್ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಹಿಂದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಗಾಯಗೊಂಡಿದ್ದ ಬೆಥೆಲ್ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದಿದ್ದರು. ಅವರು ಗಾಯದಿಂದ ಚೇತರಿಕೆಗೊಂಡು ಐಪಿಎಲ್ ಆಡುತ್ತಾರೋ ಇಲ್ಲವೋ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ಆ ಆತಂಕ ಇದೀಗ ದೂರವಾಗಿದೆ. ಭಾರತದ ವಿರುದ್ದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಬೆಥೆಲ್ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಅಭಿಷೇಕ್. ಎಸ್