
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಒಂದೇ ಒಂದು ಬಾರಿಗೆ ಟಾಸ್ ಗೆಲ್ಲದೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮಡಿಗೇರಿಸಿಕೊಂಡ ಸಾಧನೆ ಮಾಡಿದೆ. ಗ್ರೂಪ್ ಹಂತದಲ್ಲಿ ಒಂದು ಬಾರಿಯೂ ಟಾಸ್ ಭಾರತಕ್ಕೆ ಟಾಸ್ ಗೆಲುವ ಅವಕಾಶ ಒದಗಿಬಂದಿಲ್ಲ. ನಂತರ ಸೆಮಿಫೈನಲ್ನಲ್ಲಿಯೂ ಸಹ ಭಾರತ ಟಾಸ್ ಗೆಲ್ಲುವಲ್ಲಿ ಎಡವಿತ್ತು. ಕನಿಷ್ಠ ಪೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆಲ್ಲಲಿ ಎಂಬ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಅಲ್ಲೂ ನಿರಾಸೆ ಎದುರಾಗಿತ್ತು. ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಏಕದಿನ ಕ್ರಿಕೆಟ್ನಲ್ಲಿ ಭಾರತ ಸತತ 15ನೇ ಬಾರಿಗೆ ಟಾಸ್ ಸೋತಿತು. ಟಾಸ್ ಸೋಲುವಲ್ಲಿ ಭಾರತ ದಾಖಲೆ ಕೂಡ ಬರೆದಿದೆ. ಸತತವಾಗಿ ಅತಿ ಹೆಚ್ಚು ಟಾಸ್ ಸೋತವರ ಪೈಕಿ ಭಾರತ ತಂಡ, ಹಾಗೂ ನೆದರ್ಲೆಂಡ್ಸ್ ತಂಡಗಳಿವೆ. ನೆದರ್ಲೆಂಡ್ಸ್ 12 ಬಾರಿ ಟಾಸ್ ಸೋತಿದೆ. ಅಂದ ಹಾಗೇ ಭಾರತ ಕೊನೆ ಬಾರಿಗೆ ಟಾಸ್ ಗೆದ್ದಿದ್ದು 2023ರಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅನ್ನುವುದು ವಿಶೇಷ.

ಅಭಿಷೇಕ್. ಎಸ್