
ಐಪಿಎಲ್ ಸೀಸನ್ 18ಕ್ಕೆ ಕೇವಲ 11 ದಿನಗಳ ಮಾತ್ರ ಬಾಕಿ ಉಳಿದಿವೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಇನ್ನೂ ತನ್ನ ನಾಯಕನ ಹೆಸರು ಅಂತಿಮಗೊಳಿಸಿಲ್ಲ. ಮಾಹಿತಿಗಳ ಪ್ರಕಾರ ಫ್ರಾಂಚೈಸಿ ಮಾಲೀಕರು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಗಿಯುವರೆಗೂ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದರು. 12 ವಷರ್ಗಳ ಬಳಿಕ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಇದೀಗ ಡೆಲ್ಲಿ ತಂಡದ ಮಾಲೀಕರು ಅಕ್ಷರ್ ಪಟೇಲ್ ಅಥವಾ ಕೆಎಲ್ ರಾಹುಲ್ ಇಬ್ಬರ ಪೈಕಿ ಒಬ್ಬರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ನಾಯಕನ ಹೆಸರು ಘೋಷಣೆ ಆಗುವ ಸಾಧ್ಯತೆಯಿದೆ.

ಅಭಿಷೇಕ್. ಎಸ್