
ವುಮೆನ್ಸ್ ಪ್ರೀಮಿಯರ್ 2025ರ ಆವೃತ್ತಿಯ ಕೊನೆ ಲೀಗ್ ಪಂದ್ಯ ಬ್ರೆಬೊರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಬಾರಿ ವುಮೆನ್ಸ್ ಪ್ರೀಮಿಯರ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವುದರಲ್ಲಿ ವಿಫಲಗೊಂಡಿದೆ. ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಕಂಡಿದ್ದ ಸ್ಮೃತಿ ಮಂಧಾನ ಪಡೆ ನಂತರ ತವರಿನಲ್ಲಿ ನಡೆದ ಪಂದ್ಯಗಳು ಸೇರಿದಂತೆ ಸತತವಾಗಿ 5 ಪಂದ್ಯಗಳನ್ನು ಸೋತು ಪ್ಲೇ ಆಫ್ ಹಂತದಿಂದ ಹೊರಬಿದ್ದಿದೆ. ಹೀಗಾಗಿ ಇಂದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೀಸನ್ 1ರ ಚಾಂಪಿಯನ್ ಮುಂಬೈ ವಿರುದ್ದ ಔಪಚರಿಕ ಪಂದ್ಯವನ್ನು ಆಡಲಿದೆ. ಆದರೆ ಮುಂಬೈ ಇಂಡಿಯನ್ಸ್ಗೆ ಗೆಲವು ಅನಿವಾರ್ಯ ಆಗಿದ್ದು ಆರ್ಸಿಬಿ ವಿರುದ್ದ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿ ನೇರವಾಗಿ ಪೈನಲ್ ಪ್ರವೇಶಿಸಬಹುದು. ಅದಕ್ಕಾಗಿ ಬೆಂಗಳೂರು ವಿರುದ್ದ ಅತ್ಯಂತ ಎಚ್ಚರಿಕೆಯ ಆಟವನ್ನು ಆಡಲು ಮುಂಬೈ ಎದರು ನೋಡುತ್ತಿದೆ. ಇತ್ತ ಸ್ಮೃತಿ ಪಡೆಗೆ ಕಳೆದುಕೊಳ್ಳುವುದು ಏನಿಲ್ಲ ಹಾಗಾಗೀ ಯಾವುದೇ ಒತ್ತಡವಿಲ್ಲದೇ ಈ ಪಂದ್ಯವನ್ನು ಆಡಿ 2025ರ ವುಮೆನ್ಸ್ ಪ್ರೀಮಿಯರ್ ಲೀಗ್ಗೆ ಗುಡ್ ಬೈ ಹೇಳಲಿದೆ.

ಅಭಿಷೇಕ್.ಎಸ್