
ವುಮೆನ್ಸ್ ಪ್ರೀಮಿಯರ್ ಲೀಗ್ನ ಕೊನೆ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದೆ. ಬೆಬ್ರೋನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 11 ರನ್ಗಳ ಅಂತರದಿಂದ ಸೋಲಿಸಿ 2025ರ ಮಹಿಳಾ ಪ್ರೀಮಿಯರ್ ಆವೃತ್ತಿಗೆ ಗುಡ್ ಬೈ ಹೇಳಿದೆ. ಟಾಸ್ ಸೋತ ಮುಂಬೈ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ(53),ಎಲ್ಲಿಸ್ ಪರ್ರಿ (49),ರಿಚ್ಚಾ ಘೋಷ್ (36) ಅವರ ಬ್ಯಾಟಿಂಗ್ ಸಹಾಯದಿಂದ ಆರ್ಸಿಬಿ 20 ಓವರ್ಗಳಲ್ಲಿ 199 ರನ್ಗಳನ್ನು ಕಲೆಹಾಕಿತ್ತು. ದೊಡ್ಡ ಮೊತ್ತದ ಗುರಿ ಪಡೆದ ಮುಂಬೈ ಇಂಡಿಯನ್ಸ್ಗೆ ಬ್ಯಾಟ್ಸಮನ್ಗಳು ಕೈ ಕೊಟ್ಟರು. ಶೀವರ್ ಬ್ರಂಟ್ (69) ಏಕಾಂಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಸೋಲಿನೊಂದಿಗೆ ಮುಂಬೈ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನ ಅಲಂಕರಿಸಿದರೆ, ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು. ಪ್ಲೇ ಆಫ್ ಹಂತಕ್ಕೇರಿರುವ 3 ತಂಡಗಳ ಪೈಕಿ ಡೆಲ್ಲಿ ತಂಡ ಇದಾಗಲೇ ಫೈನಲ್ ಪ್ರವೇಶ ಮಾಡಿದೆ. ಮುಂಬೈ ಹಾಗೂ ಗುಜರಾತ್ ತಂಡಗಳುಎಲಿಮಿನೆಟರ್ ಪಂದ್ಯದಲ್ಲಿ ಸೆಣಸಾಡಲಿವೆ.

ಅಭಿಷೇಕ್ ಎಸ್