
ಭಾರತ ತಂಡದ ವೇಗಿ ಹಾಗೂ ಆರ್ಸಿಬಿಯ ಮಾಜಿ ಆಟಗಾರ ಮೊಹಮ್ಮದ್ ಸಿರಾಜ್ 2025ರ ಐಪಿಎಲ್ ಸೀಸನ್ನಲ್ಲಿ ಗುಜರಾತ್ ಪರ ಆಡಲಿದ್ದಾರೆ. ಟೂರ್ನಿಗೆ ಮುನ್ನ ಅಭ್ಯಾಸ ಆರಂಭಿಸಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಸಿರಾಜ್ ಅವರ ಆಗಮನವಾಗಿದೆ. ಅಹಮದಾಬಾದ್ನಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ಸಿರಾಜ್ ಬಿಂದಾಸ್ ಲುಕ್ನಲ್ಲಿ ಸಖತ್ ಹೇರ್ ಸ್ಟೆಲ್ನೊಂದಿಗೆ ಸ್ಕೂಟರ್ನಲ್ಲಿಲ ಎಂಟ್ರಿ ನೀಡಿದ್ದಾರೆ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮೊಹಮ್ಮದ್ ಸಿರಾಜ್ನನ್ನು 12.25 ಕೋಟಿ ನೀಡಿ ಖರೀದಿ ಮಾಡಿತ್ತು. ಗುಜರಾತ್ ತಂಡ ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ದ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ದ ಆಡಲಿದೆ. ಐಪಿಎಲ್ನಲ್ಲಿ 93 ಪಂದ್ಯಗಳನ್ನು ಆಡಿರುವ ಸಿರಾಜ್ ಒಟ್ದಟು 93 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಈ ಹಿಂದೆ ಹೈದ್ರಾಬಾದ್ ಹಾಗೂ ಬೆಂಗಳೂರು ತಂಡದ ಪರವಾಗಿ ಆಡಿದ್ದರು.

ಅಭಿಷೇಕ್.ಎಸ್