
ವುಮೆನ್ಸ್ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ತಂಡವನ್ನು ಮಣಿಸಿ ಎರಡನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಹೇಲಿ ಮ್ಯಾಥ್ಯೂಸ್ (77), ನ್ಯಾಟ್ ಸ್ಕಿವರ್ ಬ್ರಂಟ್ (77)ಹರ್ಮನ್ಪ್ರೀತ್ ಕೌರ್ (36) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಿಗೆ 213 ರನ್ಗಳ ಬೃಹತ್ ರನ್ ಗಳಿಸಿತ್ತು. 214 ರನ್ಗಳ ದೊಡ್ಡ ಮೊತ್ತ ಪಡೆದ ಗುಜರಾತ್ ತಂಡ ಬೆಥ್ ಮೂನಿ(6), ಡೇನಿಯಲ್ ಗಿಬ್ಬನ್ (34),ಪೋಬೆ ಎಲಿಜಬೆತ್ ಸುಸಾನ್ ಲಿಚ್ಫೀಲ್ಡ್ (30), ಭಾರತಿ ಪುಲ್ಕಾಲಿ(30), ಈ ಇಬ್ಬರು ಬ್ಯಾಟರ್ಗಳಷ್ಟೇ ಕೊಂಚ ಪ್ರಯತ್ನ ಮಾಡಿದರು. ಉಳಿದ ಯಾವ ಬ್ಯಾಟರ್ಗಳು ಯಾವುದೇ ಪ್ರಯತ್ನ ಮಾಡಲಿಲ್ಲ, ಅಂತಿಮವಾಗಿ ಗುಜರಾತ್ ತಂಡ 166 ರನ್ಗಳಿಗೆ ಅಲೌಟ್ ಆಯಿತ್ತು. ಆ ಮೂಲಕ ಚೊಚ್ಚಲ ಬಾರಿಗೆ ಫೈನಲ್ ತಲುಪುವ ಕನಸು ಕನಸಾಗಿಯೇ ಉಳಿಯಿತ್ತು. ಇತ್ತ ಮುಂಬೈ ತಂಡ ಎರಡನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟಿದ್ದು ಮಾರ್ಚ್ 15ರಂದು ಡೆಲ್ಲಿ ವಿರುದ್ದ ಫೈನಲ್ ಪಂದ್ಯ ಆಡಲಿದೆ.

ಅಭಿಷೇಕ್ ಎಸ್