
2025ರ ಐಪಿಎಲ್ನಲ್ಲಿ ಕಠಿಣ ನಿಯಮಗಳನ್ನು ತಂದಿದ್ದ ಬಿಸಿಸಿಐ ಇದೀಗ ಮೊದಲ ಬಾರಿಗೆ ಅದನ್ನು ಕಾರ್ಯಯೋಜನೆಗೆ ತಂದಿದೆ. ಅದರಂತೆ ಈ ಬಾರಿ ಐಪಿಎಲ್ನಲ್ಲಿ ಹಿಂದಕ್ಕೆ ಸರಿದ ಇಂಗ್ಲೆಂಡ್ ತಂಡದ ಆಟಗಾರ ಹ್ಯಾರಿ ಬ್ರೂಕ್ಗೆ 2 ವರ್ಷ ಬ್ಯಾನ್ ಹೇರಲಾಗಿದೆ. ಈ ಬಾರಿ ಹ್ಯಾರಿ ಬ್ರೂಕ್ ಡೆಲ್ಲಿ ತಂಡದ ಪರ ಅಡಬೇಕಿತ್ತು. ಆದರೆ ಅವರು ಈ ಬಾರಿ ಐಪಿಎಲ್ ಆಡದಿರಲು ನಿರ್ಧಾರಿಸಿದ್ದಾರೆ. ಹೀಗಾಗಿ ಅವರು 2025,2026ರ ಸೀಸನ್ನಿಂದ ಬ್ಯಾನ್ ಅಗಿದ್ದಾರೆ. ಐಪಿಎಲ್ ನಿಯಮದ ಪ್ರಕಾರ ಹರಾಜಿನಲ್ಲಿ ಯಾವುದೇ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಗಾಯದ ಹೊರತಾಗಿ ಬೇರೆ ಯಾವುದೇ ಕಾರಣಕ್ಕೂ ಆಟಗಾರ ಐಪಿಎಲ್ನಿಂದ ಹೊರಗುಳಿಯುವಂತಿಲ್ಲ. ಆದರೆ ಹ್ಯಾರಿ ಬ್ರೂಕ್ ಈ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ. ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡು, ಡೆಲ್ಲಿ ಕ್ಯಾಪಿಟಲ್ಸ್ ಖರೀದಿ ಮಾಡಿ ಇನ್ನೇನೂ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ, ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡ ಪರ ಆಡಲೆಂದು ಐಪಿಎಲ್ನಿಂದ ಹಿಂದೆ ಸರಿವುದಾಗಿ ಹೇಳಿದ್ದಾರೆ. ಹೀಗಾಗಿ ಅವರು ಈ ಸೀಸನ್ ಒಳಗೊಂಡತೆ ಮುಂದಿನ ಎರಡು ಸೀಸನ್ಗಳನ್ನು ಆಡುವಂತಿಲ್ಲ.
