
ಐಪಿಎಲ್ 2025ರ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೂತನ ನಾಯಕನನ್ನು ಹೆಸರಿಸಿದೆ. ಐಪಿಎಲ್ನ ಉಳಿದ ಎಲ್ಲ ತಂಡಗಳು ತಮ್ಮ ನಾಯಕನನ್ನು ಘೋಷಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಇನ್ನೂ ಯಾವುದೇ ಹೆಸರನ್ನು ಘೋಷಿಸಿರಲಿಲ್ಲ. ಇದೀಗ ಡೆಲ್ಲಿ ತಂಡ ಅಂತಿಮವಾಗಿ 2025ರ ಐಪಿಎಲ್ ಟೂರ್ನಿಗೆ ನೂತನ ನಾಯಕನನ್ನು ಘೋಷಿಸಿದೆ. ಈ ಸೀಸನ್ನಲ್ಲಿ ಭಾರತದ ಸ್ಟಾರ್ ಅಲ್ರೌಂಡರ್ ಅಕ್ಷರ್ ಪಟೇಲ್ ಡೆಲ್ಲಿ ತಂಡದ ಸಾರಥಿಯಾಗಿ ಆಯ್ಕೆ ಆಗಿದ್ದಾರೆ. 150 ಪಂದ್ಯಗಳನ್ನು ಆಡಿರುವ ಅಕ್ಷರ್ 1653 ರನ್ಗಳನ್ನು ಗಳಿಸಿದ್ದಾರೆ. ಬೌಲಿಂಗ್ನಲ್ಲಿ 123ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಐಪಿಎಲ್ನಲ್ಲಿ ಆಟಗಾರನ್ನಾಗಿ ಅನುಭವವಿರುವ ಅಕ್ಷರ್ಗೆ ನಾಯಕನ್ನಾಗಿ ತಂಡ ಮುನ್ನೆಡೆಸುತ್ತಿರುವುದು ಇದೇ ಮೊದಲು. ಡೆಲ್ಲಿ ಫ್ರಾಂಚೈಸಿ ಅಕ್ಷರ್ ಬದಲಿಗೆ ಕೆಲ್ ರಾಹುಲ್ ನಾಯಕನ್ನಾಗಿ ಆಯ್ಕೆ ಮಾಡುವ ನಿರ್ಧಾರ ಮಾಡಿತ್ತಾದರೂ ರಾಹುಲ್ ಅವರೇ ನಾಯಕತ್ವ ಬೇಡ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಅಕ್ಷರ್ ಪಟೇಲ್ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ ಎಂದೇಳಲಾಗುತ್ತಿದೆ.

ಅಭಿಷೇಕ್.ಎಸ್