
ಅಂತರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ-20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಮಾಸ್ಟರ್ಸ್ ವಿರುದ್ದ ಇಂಡಿಯಾ ಮಾಸ್ಟರ್ಸ್ ಜಯ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಮಾಸ್ಟರ್ಸ್ ತಂಡ 20 ಓವರ್ಗಳಿಗೆ 147 ರನ್ ಕಲೆಹಾಕಿತ್ತು. ವಿಂಡೀಸ್ ಪರ ಲೆಂಡ್ಲ್ ಸಿಮನ್ಸ್ (57), ಡ್ವೇನ್ ಸ್ಮಿತ್ (45), ಬಿಟ್ಟರೆ ಬೇರೆ ಯಾವ ಬ್ಯಾಟರ್ಗಳು ರನ್ ಗಳಿಸಲು ಸಾಧ್ಯವಾಗಲಿಲ್ಲ. ಬೌಲಿಂಗ್ನಲ್ಲಿ ಭಾರತದ ಪರ ವಿನಯ್ ಕುಮಾರ್ ಉತ್ತಮ ಬೌಲಿಂಗ್ ಮಾಡಿ 3 ವಿಕೆಟ್ ಕಬಳಿಸಿದರು. ಶಾದಾಬ್ ನದೀಮ್ 2 ವಿಕೆಟ್, ಪವನ್ ನೇಗಿ, ಸಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದುಕೊಂಡರು. ಇನ್ನೂ 148 ರನ್ಗಳ ಟಾರ್ಗೆಟ್ ಬೆನ್ನಟಿದ ಭಾರತಕ್ಕೆ ಅಂಬಾಟಿ ರಾಯುಡು (74) ಅಬ್ಬರದ ಬ್ಯಾಟಿಂಗ್ ನಡೆಸಿದರು. ಇವರ ಜೊತಗೆ ಸಚಿನ್ ತೆಂಡೂಲ್ಕರ್ (25) ರನ್, ಗುರುಕಿರತ್ ಸಿಂಗ್ ಮಾನ್ (14), ಯುವರಾಜ್ ಸಿಂಗ್ (13), ಸ್ಟುವರ್ಟ್ ಬಿನ್ನಿ (16) ಅವರ ಸಮಯೋಚಿತ ಬ್ಯಾಟಿಂಗ್ನಿಂದ ಇಂಡಿಯಾ ಮಾಸ್ಟರ್ಸ್ ತಂಡ ಸುಲಭವಾಗಿ ಗುರಿ ಮುಟ್ಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಅಭಿಷೇಕ್. ಎಸ್