
ಐಐಪಿಎಲ್ 18ರ ಸೀಸನ್ ಹತ್ತಿರದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ವೇಗದ ಬೌಲರ್ ಉಮ್ರಾನ್ ಮಲ್ಲಿಕ್ ಗಾಯದಿಂದ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡ ಉಮ್ರಾನ್ ಮಲ್ಲಿಕ್ ಅವರನ್ನು 75 ಲಕ್ಷಕ್ಕೆ ಖರೀದಿ ಮಾಡಿತ್ತು. ಇದೀಗ ಉಮ್ರಾನ್ ಮಲ್ಲಿಕ್ ಅವರ ಸ್ಥಾನಕ್ಕೆ ಕೆಕೆಆರ್ ಬದಲಿ ಆಟಗಾರನನ್ನು ಘೋಷಿಸಿದೆ. ಉಮ್ರಾನ್ ಸ್ಥಾನಕ್ಕೆ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಸಕಾರಿಯಾ ಭಾರತ ತಂಡದ ಪರವೂ ಆಡಿದ್ದು 2 ಟಿ20, 1 ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಜೊತೆಗೆ 19 ಪಂದ್ಯಗಳನ್ನು ಆಡಿದ್ದು 20 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ. 27 ವರ್ಷದ ಸಕರಿಯಾ ಕಳೆದ ವರ್ಷ ಕೆಕೆಆರ್ ತಂಡದ ಭಾಗವಾಗಿದ್ದರು. ಆದರೆ ಯಾವ ಒಂದು ಪಂದ್ಯದಲ್ಲೂ ಆಡಲು ಅವಕಾಶ ಸಿಗಲಿಲ್ಲ. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಸಕರಿಯಾ ಅನ್ಸೋಲ್ಡ್ ಆಗಿದ್ದರು. ಇದೀಗ ಬದಲಿ ಆಟಗಾರನ್ನಾಗಿ ಮತ್ತೆ ಕೆಕೆಆರ್ ಬಳಗಕ್ಕೆ ಸೇರಿಕೊಂಡಿದ್ದಾರೆ.

ಅಭಿಷೇಕ್.ಎಸ್