
ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ತಮ್ಮ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಮರಳಿದ್ದಾರೆ.ಕೇವಲ 9 ದಿನಗಳ ಬಾಹ್ಯಾಕಾಶ ಪಯಣಕ್ಕಾಗಿ ಹೊರಟಿದ್ದ ಸುನಿತಾ ಮತ್ತು ಬುಚ್ ತಾಂತ್ರಿಕ ತೊಂದರೆಯಿಂದಾಗಿ 9 ತಿಂಗಳ ಕಾಲ ಅಂತರಿಕ್ಷದಲ್ಲೇ ಉಳಿಯುವಂತಾಗಿತ್ತು. ಭೂಮಿಗೆ ಬರುತ್ತಿದ್ದಂತೆ ಬುಚ್ ಮತ್ತು ಸುನೀತಾ ಎಲ್ಲರತ್ತಾ ಕೈ ಬೀಸಿ ನಗುಬೀರಿದರು. ಇನ್ನು ಮುಂದಿನ 45 ದಿನಗಳ ಕಾಲ ಅವರಿಗೆ ಆರೈಕೆ ನೀಡಲಾಗುತ್ತಿದ್ದು, ಬೆಚ್ಚಗಿನ ಉಡುಗೆ ಮತ್ತು ಪೋಷಕಾಂಶ ಉಳ್ಳ ಆಹಾರ ನೀಡುವುದಾಗಿ ನಾಸಾ ತಿಳಿಸಿದೆ. ಇದೇ ವೇಳೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು ನಾವು ಜನರಿಗೆ ನೀಡಿದ್ದ ವಚನವನ್ನು ಉಳಿಸಿಕೊಂಡಿದ್ದೇವೆ.ಸುನೀತಾ ಮತ್ತು ಬುಚ್ ತಂಡವನ್ನು ಯಶಸ್ವಿಯಾಗಿ ಭೂಮಿಗೆ ತರಲು ಇಂದು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಅಭಿಷೇಕ್. ಎಸ್