
ಕಲ್ಕತ್ತಾಗೆ ಪ್ರಯಾಣ ಬೆಳಸಿದ ಆರ್ಸಿಬಿ ತಂಡ
ನಾಳೆಯಿಂದ 2025ರ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಮಾರ್ಚ್22ರಿಂದ ಮೇ 25ರವರೆಗೆ ಐಪಿಎಲ್ ಜರುಗಲಿದ್ದು, 2 ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ 3 ಬಾರಿಯ ರನ್ನರ್ ಅಪ್ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಕಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಬೆಂಗಳೂರು ಹಾಗೂ ಕಲ್ಕತ್ತಾ ನಡುವಿನ ಮೊದಲ ಪಂದ್ಯವೇ ಹೈ ವೋಲ್ಟೆಜ್ನಿಂದ ಕೂಡಿದ್ದು, ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಆರ್ಸಿಬಿ ಆಟಗಾರರು ಕಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಾರೆ. ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ರಜತ್ ಪಾಟೀದಾರ್, ಫಿಲ್ ಸಾಲ್ಟ್ ಸೇರಿದಂತೆ ಹಲವು ಆಟಗಾರರು ಕಲ್ಕತ್ತಾಗೆ ಪ್ರಯಾಣ ಬೆಳೆಸಿರುವ ವಿಡಿಯೋ ಆರ್ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಐಪಿಎಲ್ ಸೀಸನ್ 18 ಮಾರ್ಚ್ 22ರಿಂದ ಮೇ 25ರವರೆಗೆ ನಡೆಯಲಿದೆ. ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಟ ನಡೆಸಲಿವೆ.

ಅಭಿಷೇಕ್. ಎಸ್