
ಇತ್ತೀಚೆಗೆ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾಗೆ ಬಿಸಿಸಿಐ 58 ಕೋಟಿಯನ್ನು ಬಹುಮಾನವಾಗಿ ಘೋಷಿಸಿದೆ. ಇದರ ಪ್ರಕಾರ 15ರ ಆಡುವ ಬಳಗದಲ್ಲಿದ್ದ ಪ್ರತಿ ಪ್ರತಿ ಆಟಗಾರನಿಗೆ 3 ಕೋಟಿ ಹಣ ಬಹಮಾನವಾಗಿ ಸಿಗಲಿದೆ ಎಂದು ಬಿಸಿಸಿಐ ಅಧಿಕೃತ ಮೂಲಗಳು ತಿಳಿಸಿವೆ. ಇದರ ಜೊತೆಗೆ ಐಸಿಸಿ ಘೋಷಿಸಿರುವ ಬಹುಮಾನದ ಮೊತ್ತ 20 ಕೋಟಿ ಹಣವನ್ನು ಪ್ರತಿ ಆಟಗಾರನಿಗೆ ತಲಾ 1 ಕೋಟಿ 43 ಲಕ್ಷ ಬಹುಮಾನವಾಗಿ ಸಿಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ತಂಡದ ಸಂಯೋಜನೆಯಲ್ಲಿ ಹಾಗೂ ಭಾರತ ತಂಡ ಚಾಂಪಿಯನ್ ಆಗಿ ಹೊರ ಹಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರ ಪಡೆಯುವಷ್ಟೇ ಬಹುಮಾನದ ಮೊತ್ತವನ್ನು ಪಡೆಯಲಿದ್ದಾರೆ. ಹಾಗೇ ತಂಡದ ಸಪೋರ್ಟಿಂಗ್ ಸ್ಟಾಫ್ನಲ್ಲಿರುವವರಿಗೆ ತಲಾ 50 ಲಕ್ಷ ಬಹುಮಾನ ಸಿಗಲಿದೆ. ಭಾರತ ತಂಡ 2013ರ ಬಳಿಕ ಮತ್ತೆ ಚಾಂಪಿಯನ್ಸ್ ಟ್ರೋಫಿ ಗೆದ್ದು ಕೊಂಡಿದ್ದು, ನಾಯಕ ರೋಹಿತ್ ಶರ್ಮಾ ಅಡಿಯಲ್ಲಿ 2024ರ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಅಭಿಷೇಕ್. ಎಸ್