
ಐಪಿಎಲ್ ಆರಂಭದಲ್ಲೇ ರಣರೋಚಕ ಪಂದ್ಯದ ರಸದೌತಣ ಅಭಿಮಾನಿಗಳಿಗೆ ಸಿಕ್ಕಿದೆ. ದಕ್ಷಿಣ ಭಾರತದ ಡರ್ಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಕಳೆದ ಬಾರಿಗೆ ಹೋಲಿಸಿದರೆ ಬೆಂಗಳೂರು ತಂಡ ಮತ್ತಷ್ಟು ಬಲಿಷ್ಠವಾಗಿ ಕಾಣಿಸುತ್ತಿದೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಆರಂಭಿಕರಾಗಿ ಮೊದಲ ಪಂದ್ಯದಲ್ಲೇ ಕ್ಲಿಕ್ ಆಗಿದ್ದಾರೆ. 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ನಿರೀಕ್ಷೆಗೆ ತಕ್ಕ ಆಟವಾಡಬೇಕಿದೆ. 4ನೇ ಕ್ರಮಾಂಕದಲ್ಲಿ ನಾಯಕ ರಜತ್ ಪಾಟಿದರ್ ತಂಡದ ಬ್ಯಾಟಿಂಗ್ ಆಧಾರವಾಗಿದ್ದಾರೆ. ಅದರಲ್ಲೂ ಸ್ಪಿನ್ನರ್ಸ್ ವಿರುದ್ದ ರಜತ್ ಉತ್ತಮ ಸ್ಟ್ರೇಕ್ ರೇಟ್ ಹೋಮದಿರುವುದು ಆರ್ಸಿಬಿಗೆ ಪ್ಲಸ್ ಪಾಯಿಂಟ್, ಆರ್ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಿದ್ದು, 5ನೇ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, 6ನೇ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ, 7ನೇ ಕ್ರಮಾಂಕದಲ್ಲಿ ಟೀಮ್ ಡೇವಿಡ್ ಹಾಗೂ 8 ನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ. ಸಿಎಸ್ಕೆ ತಂಡದಲ್ಲಿ ಬ್ಯಾಟಿಂಗ್ಗಿಂತ ಸ್ಪಿನ್ನಿಂಗ್ ವಿಭಾಗ ಹೆಚ್ಚು ಬಲಿಷ್ಟವಾಗಿದೆ. ಆರ್ ಅಶ್ವಿನ್, ಜಡೇಜಾ, ನೂರ್ ಅಹ್ಮದ್, ರಚಿನ್ ರವೀಂದ್ರ ಚೆನ್ನೈ ಸ್ಪಿನ್ ಅಸ್ತ್ರಗಳಾಗಿದ್ದಾರೆ. ಬ್ಯಾಟಿಂಗ್ನಲ್ಲಿ ನಾಯಕ ರುತುರಾಜ್ ಗಾಯಕ್ವಾಡ್, ಡೇವೋನ್ ಕಾನ್ವೆ, ರಾಹುಲ್ ತ್ರಿಪಾಠಿ, ಶಿವಂ ದುಬೆಯ ಶಕ್ತಿ ಸಿಎಸ್ಕೆ ತಂಡಕ್ಕಿದೆ.

ಭುವನೇಶ್ವರ್ ಕುಮಾರ್ ಆಡುವ ಸಾಧ್ಯತೆ
ಆರ್ಸಿಬಿ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಕಳೆದ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಭುವಿ ಅಂತಿಮ ಕ್ಷಣದಲ್ಲಿ ಗಾಯಕ್ಕೆ ಒಳಗಾಗಿದ್ದರಿದ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ಬದಲಿಗೆ ರಸೀಖ್ ಸಲಾಂದಾರ್ ಆಡಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಭುವಿ ಸಂಪೂರ್ಣವಾಗಿ ಫಿಟ್ ಇದ್ದರೆ ಸಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ..
ಸಿಎಸ್ಕೆ ಸ್ಪಿನ್ನರ್ಸ್ Vs ಆರ್ಸಿಬಿ ಬ್ಯಾಟರ್ಸ್
ಇಂದಿನ ಪಂದ್ಯ ಬಹುತೇಕವಾಗಿ ಚೆನ್ನೈ ಸ್ಪಿನ್ನರ್ಸ್ ಹಾಗೂ ಬೆಂಗಳೂರು ಬ್ಯಾಟರ್ಗಳ ಫೈಟ್ ಎಂದೇ ಹೇಳಲಾಗುತ್ತಿದೆ. ಚೆಪಾಕ್ ಸ್ಟೇಡಿಯಂನಲ್ಲಿ ಸ್ಪಿನ್ನರ್ಗಳು ಹೆಚ್ಚಿನ ಅನುಕೂಲ ಪಡೆಯುವುದರಿಂದ ಆರ್ ಅಶ್ವಿನ್, ಜಡೇಜಾ, ನೂರ್ ಅಹ್ಮದ್ರಂತಹ ಸ್ಪಿನ್ನರ್ಗಳನ್ನು ಕೊಹ್ಲಿ, ಫಿಲ್ ಸಾಲ್ಟ್, ರಜತ್, ಪಡಿಕ್ಕಲ್, ಲಿಯಾಮ್ ಲಿವಿಂಗ್ಸ್ಟೋನ್, ಹೇಗೆ ಎದುರಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಚೆಪಾಕ್ ಪಿಚ್ನಲ್ಲಿ ರನ್ ಗಳಿಸಬೇಕಾದರೆ ಬ್ಯಾಟರ್ಗಳು ನೆಲಕಚ್ಚಿ ಆಡಬೇಕಿದೆ. ಹೊಡಿಬಡಿ ಆಟಗಾರರನ್ನು ಹೊಂದಿರುವ ಬೆಂಗಳೂರು ಬ್ಯಾಟರ್ಗಳು ಯಾವ ರೀತಿ ಚೆನ್ನೈ ಬೌಲರ್ಗಳನ್ನು ಎದುರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪಿಚ್ ರಿಪೋರ್ಟ್
ಸಹಜವಾಗಿ ಚೆಪಾಕ್ ಸ್ಟೇಡಿಯಂ ವೇಗಿಗಳಿಗಿಂತ ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯಕವಾಗಲಿದೆ. ಪಂದ್ಯ ಮುಂದೆ ಸಾಗುತ್ತಿದ್ದಂತೆ ಬ್ಯಾಟರ್ಗಳಿಗೆ ರನ್ ಗಳಿಸಲು ಕೊಂಚ ಕಷ್ಟವಾದರೂ ನೆಲಕಚ್ಚಿ ಆಡಿದರೆ ರನ್ ಗಳಿಸಬಹುದು. ಹೀಗಾಗಿ ಬ್ಯಾಟರ್ಗಳು ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಂತರೆ ರನ್ ಸುಲಭವಾಗಿ ಹರಿದುಬರಲಿದೆ. ಜೊತೆಗೆ ಈ ಪಂದ್ಯಕ್ಕೆ ಮಳೆಯ ಆತಂಕವಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದಿನ ದಿನದ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ ಎಂದೇಳಲಾಗಿದೆ.
ಮುಖಾಮುಖಿ
ಐಪಿಎಲ್ನಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಸಿಎಸ್ಕೆ 21 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದರೆ, ಆರ್ಸಿಬಿ 11 ಪಂದ್ಯಗಳಲ್ಲಿ ಗೆದ್ದಿದೆ, 1 ಪಂದ್ಯ ಮಾತ್ರ ಯಾವುದೇ ಫಲಿತಾಂಶವಿಲ್ಲದೇ ಕೊನೆಗೊಂಡಿದೆ.
ಸಿಎಸ್ಕೆ ತಂಡ
ರಚಿನ್ ರವೀಂದ್ರ, ರುತುರಾಜ್ ಗಾಯ್ಕ್ವಾಡ್, ರಾಹುಲ್ಗ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಆರ್ ಅಶ್ವಿನ್, ನಾಥನ್ ಎಲ್ಲಿಸ್, ನೂರ್ ಅಹ್ಮದ್, ಖಲೀಲ್ ಅಹ್ಮದ್
ಆರ್ಸಿಬಿ ತಂಡ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ, ಟೀಮ್ ಡೇವಿಡ್, ಕೃನಾಲ್ ಪಾಂಡ್ಯ, ರಾಸಿಕ್ ಸಲಾಂದಾರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ
ಅಭಿಷೇಕ್ . ಎಸ್