
amazing health benefits of eating jackfruit
(ಅಶ್ವವೇಗ) Ashwaveega News 24×7 ಜು.03: (ಅಶ್ವವೇಗ) Ashwaveega News 24×7 ಜು.03: ಹಲಸಿನ ಹಣ್ಣು ಎಂದಾಗ ಅದರ ಸಿಹಿಗೆ ಬಾಯಲ್ಲಿ ನೀರು ಬರುತ್ತೆ, ಈಗಷ್ಟೇ ಅಲ್ಪ ಮಳೆ ಶುರುವಾಗಿದೆ. ಇತ್ತ ಹಲಸಿನ ಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಸಕತ್ ರುಚಿ ಕೊಡುವಂತಹ ಈ ಹಲಸಿನ ಹಣ್ಣು ಈಗ ಮಾರುಕಟ್ಟೆಯಲ್ಲಿ ಎಲ್ಲಂದ್ರಲ್ಲಿ ಕಾಣ ಸಿಗುತ್ತೆ. ಹಣ್ಣಿನ ತೊಳೆಗಿರುವ ರೇಟ್ ಅಂತೂ ಕೇಳೊದೆ ಬೇಡ. ಹಾಗಿದ್ರೆ ಈ ಹಣ್ಣಿನಲ್ಲಿರು ಆರೋಗ್ಯ ಸಂಗತಿಗಳೇನು ಅಂತ ತಿಳ್ಕೋ ಬೇಕಾ ಹಾಗಿದ್ರೆ ಅಶ್ವ ಹೆಲ್ತ್ ನಲ್ಲಿ ಈ ಸ್ಟೋರಿ ನಿಮಗಾಗಿ. . . .
ಮಳೆಗಾಲ, ಚಳಿಗಾಲ ಕಳೆದು ಬೇಸಿಗೆ ಕಾಲವನ್ನು ಬರಮಾಡಿಕೊಳ್ಳುವ ಸಮಯದಲ್ಲಿ, ಮಾವು , ಹಲಸಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಲು ಸಿಗುತ್ತದೆ. ಅದ್ರಲ್ಲೂ ಗಜಗಾತ್ರದ ಹಲಸಿನ ಹಣ್ಣುಗಳು ಅಂತೂ ಆಕರ್ಷಕ ಕೇಂದ್ರ ಬಿಂದು ಆಗಿ ಎಲ್ಲರನ್ನೂ ಕೂಡ ಕೈ ಬೀಸಿ ತನ್ನತ್ತ ಕರೆಯುತ್ತೆ. ಈ ಹಣ್ಣನ್ನು ಮನೆಗೆ ತಂದು, ಯಾವುದಾದರೂ ಮೂಲೆಯಲ್ಲಿ ಇಟ್ರೂ ಸಾಕು, ಇದರ ಪರಿಮಳವು, ಅಕ್ಕಪಕ್ಕ ದವರ ಮನೆಗೂ ಹಬ್ಬುತ್ತದೆ. ಇದೇ ಈ ಹಣ್ಣಿನ ತಾಕತು.
ಇನ್ನು ಈ ಹಣ್ಣು ನೋಡಲು ಮಾತ್ರ ಒರಟಾಗಿ, ಮೈಮೇಲೆ ಮುಳ್ಳು ಮುಳ್ಳು ರೀತಿ ಕಂಡು ಬಂದರೂ, ಈ ಹಣ್ಣಿನ ಒಳಗಿನ ಪ್ರತಿಯೊಂದು ಭಾಗವೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಮಾರ್ಕೆಟ್ನಲ್ಲಿ ಕೂಡ ಇದಕ್ಕೆ ಸಕತ್ ಡಿಮ್ಯಾಂಡ್ ಇರುತ್ತೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಅಂಶಗಳಾದ, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಸರಾಗವಾಗಿ ಸಿಗೊಂದ್ರಿಂದ , ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವು ದರಲ್ಲಿ ಎರಡು ಮಾತಿಲ್ಲ.
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರು ವವರು, ಹಲಸಿನ ಹಣ್ಣುನ್ನು ಮಿತವಾಗಿ ಸೇವನೆ ಮಾಡುತ್ತಾ ಬಂದರೆ, ಈ ಕಾಯಿಲೆಯನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು.ಪ್ರಮುಖವಾಗಿ ಈ ಹಣ್ಣಿನಲ್ಲಿ ಪೊಟಾಷ್ಯಿಯಂ ಅಂಶ ಅಧಿಕವಾಗಿ ಕಂಡುಬರುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಹಾಯವಾಗ್ತದೆ.
ಇಲ್ಲಿ ಪ್ರಮುಖವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನಾಪ್ಪ ಅಂದ್ರೆ, ಪೊಟ್ಯಾಶಿಯಂ ಅಂಶ ದೇಹದಲ್ಲಿ ಸೋಡಿಯಂ ಅಂಶವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ಇದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಹೃದಯಕ್ಕೆ ಸಂಬಂಧಪಟ್ಟ ಇನ್ನಿತರ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಈ ಹಣ್ಣಿನಲ್ಲಿ ನಾರಿನಾಂಶ, ಸರಾಗವಾಗಿ ಕಂಡು ಬರುವುದರಿಂದ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುವಲ್ಲಿ, ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವು ದರಿಂದ, ಜೀರ್ಣ ಪ್ರಕ್ರಿಯೆಗಳು ಸರಿಯಾಗಿ ನಡೆದು, ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಕ್ರಮೇಣವಾಗಿ ದೂರ ವಾಗುತ್ತಾ ಹೋಗುತ್ತದೆ.
ಹಲಸಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಹಾಗು ಫ್ಲೇವ ನಾಯ್ಡ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಅದರಲ್ಲೂ ಆಂಟಿಆಕ್ಸಿಡೆಂಟ್ ಅಂಶಗಳು ದೇಹದ ಕಂಡು ಬರುವ ಫ್ರೀ ರಾಡಿಕಲ್ ಗಳ ವಿರುದ್ಧ ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತವೆ. ಇದರಿಂದ ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿ ಆಗುವುದನ್ನು ತಡೆಯುತ್ತೆ. ಇನ್ನು ನಿಮಗೂ ಒಮ್ಮೊಮ್ಮೆ ನಾಲ್ಕು ಹಜ್ಜೆ ನಡೆದರೆ ತುಂಬಾನೇ ಸುಸ್ತು, ಬಳಲಿಕೆ ಆಗುವ ಅನುಭವ ಉಂಟಾಗಿರ್ಬೊದು.
ಇದಕ್ಕೆ ಪ್ರಮುಖ ಕಾರಣ, ಆರೋಗ್ಯದಲ್ಲಿ ಕಂಡು ಬರುವ ಕಬ್ಬಿಣಾಂಶದ ಕೊರತೆ. ಹಾಗಾಗಿ ಕಬ್ಬಿಣದ ಅಂಶವನ್ನು ಹೆಚ್ಚು ಒಳಗೊಂಡ ಹಲಸಿನ ಹಣ್ಣು ತಿನ್ನುವುದು ಬೆಸ್ಟ್. ಈ ಹಣ್ಣಿನಲ್ಲಿ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಠಿಕ ಸತ್ವಗಳು ಯತೇಚ್ಛವಾಗಿ ಸಿಗುತ್ತೆ. ಉದಾಹರಣೆಗೆ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಮತ್ತು ನಯಾಸಿನ್ ಅಂಶದ ಜೊತೆಗೆ ತಾಮ್ರ ಮತ್ತು ಫೋಲೆಟ್ ಅಂಶಗಳು ಕೂಡ ಹೆಚ್ಚಾಗಿ ಇರುತ್ತವೆ. ಇದು ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಯನ್ನು ನೀಗಿಸಿ, ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
ಹಲಸಿನ ಹಣ್ಣಿನಲ್ಲಿ ವಿಟಮಿನ್ ಬಿ6 ಅಂಶ ಹೆಚ್ಚಾಗಿ, ಕಂಡು ಬರುತ್ತದೆ. ಇವು ರಕ್ತ ಸಂಚಾರದಲ್ಲಿ ಕಂಡುಬರುವ ಹೋಮೊಸಿಸ್ಟೀನೆ ಅಂಶಗಳನ್ನು ಕಡಿಮೆ ಮಾಡಿ, ಹೃದಯದ ರಕ್ತನಾಳಗಳಿಗೆ ಸರಿಯಾಗಿ ರಕ್ತ ಪೂರೈಕೆ ಆಗುವಂತೆ ಮಾಡುತ್ತದೆ. ಇದರಿಂದ ಹೃದಯ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಇನ್ನು ಇಷ್ಟು ಮಾತ್ರವಲ್ಲದೆ ನೀವು ಹಲಸಿನ ಹಣ್ಣಿನ ಬೀಜದಿಂದ ಕೂಡ ಆರೋಗ್ಯ ಲಾಭ ಕಂಡುಕೊಳ್ಳಿ. ಇದರ ಲಾಭ ಗೊತ್ತಾದ್ರೆ ನೀವೂ ಯಾವತ್ತೂ ಹಲಸಿನ ಬೀಜವನ್ನ ವೇಸ್ಟ್ಮಾಡಲ್ಲ.
ಹಲಸಿನ ಬೀಜಗಳನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲಸಿನ ಬೀಜಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ನಂತಹ ಸಮಸ್ಯೆಗಳನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಹಲಸಿನ ಬೀಜಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದರಿಂದಾಗಿ ಹೃದಯ, ಕಣ್ಣು, ಮೂಳೆಗಳು ಮತ್ತು ಹಲ್ಲುಗಳು ಬಲವಾಗಿರುತ್ತವೆ.ಕೂದಲು ಉದ್ದವಾಗಿ ಬೆಳೆಯುತ್ತದೆ.
ಚರ್ಮದ ಸುಕ್ಕು ಕಡಿಮೆಯಾಗುತ್ತದೆ, ಹಲಸಿನ ಬೀಜವನ್ನು ಪುಡಿ ಮಾಡಿ ತಣ್ಣನೆಯ ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಸುಕ್ಕು ನಿವಾರಣೆಯಾಗುವುದು. ಈ ಪ್ರಯೋಗವನ್ನು ಸುಮಾರು 15 ರಿಂದ 20 ದಿನಗಳು ಮಾಡಿದರೆ ಉತ್ತಮ ಫಲಿತಾಂಶ ದೊರಕುತ್ತದೆ.ಸೋ ಹಾಗಾಗಿ ಇನ್ಮೆಲೆ ಹಲಸಿನ ಹಣ್ಣು ಕಣ್ಣಿಗೆ ಬಿದ್ರೆ ತಿನ್ನೊದನ್ನ ಮರಿಬೇಡಿ, ಹಾಗೇ ಹಲಸಿನ ಬೀಜವನ್ನು ಎಸೆಯಬೇಡಿ. ಹಣ್ಣನ್ನು ತಿಂದು ನಿಮ್ಮ ಆರೋಗ್ವನ್ನು ವೃದ್ಧಿಸಿಕೊಂಡು, ಆರೋಗ್ಯ ಕಾಪಾಡಿಕೊಳ್ಳಿ.