
Bhavana Remanna Is PREGNANT With Twins At 40 As A Single Woman
(ಅಶ್ವವೇಗ) Ashwaveega News 24×7 ಜು.05: ಚಂದ್ರಮುಖಿ ಪ್ರಾಣಸಖಿ ಭಾವನ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. . ಹೌದು. . ʼಮಧುವನ ಕರೆದರೇ ತನುಮನ ಸೆಳೆದರೇ ಶರಣಾಗು ನೀ ಆದರೆ…ʼ ಎನ್ನುತಾ ಚಂದನದಲ್ಲಿ ಗಮನ ಸೆಳೆದವರು ಭಾವನ. ಇದೀಗ ಭಾವನ ಅವರು ಅದೆಷ್ಟೋ ದಿನಗಳ ನಂತರ ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ. ಏನಿದು ಗುಡ್ ನ್ಯೂಸ್ ಅಂತೀರಾ ಈ ಸ್ಟೋರಿ ನೋಡಿ. . .
ಹೌದು. . ಚಂದವನದ ತಾರೆ ನಟಿ ಭಾವಣ ರಾಮಣ್ಣ ಅವರು ಮದುವೆಯಾಗದೇ 40ನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಭಾವನ ಅವರೇ ತಮ್ಮ “INSTAGRAM” ನಲ್ಲಿ ಹಂಚಿಕೊಂಡಿದ್ದಾರೆ. ಭಾವನ ಅವರು 6 ತಿಂಗಳ ಗರ್ಭಿಯಾಗಿದ್ದು ಶೀಘ್ರದಲ್ಲೇ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಆದ್ರೆ ಇದುವರೆಗೂ ಮದುವೆಯಾಗದೆ ನಟಿ ಭಾವನ ಹೇಗೆ ತಾಯಿಯಾಗ್ತಾಯಿದ್ದಾರೆ ಅನ್ನೊದು ಎಲ್ಲರಿಗೂ ಒಂದು ದೊಡ್ಡ ಪ್ರಶ್ನೆಯಾಗಿ ಕಾಡ್ತಿದೆ ಜೊತೆಗೆ ಅಶ್ವರ್ಯ ಆಗ್ತಿದೆ…! ಆದ್ರೆ ಇದು ಸುಳ್ಳಲ್ಲ ಕಂಡ್ರಿ. ನಿಜವಾಗ್ಲೂ ಭಾವನ ಅವರು ಸದ್ಯದಲ್ಲೇ Twins ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಚಂದನವನದಲ್ಲಿ ನಟಿಯಾಗಿ ರಾಜಕೀಯದಲ್ಲಿ ರಾಜಕಾರಣಿಯಾಗಿ ತಮ್ಮನ ತಾವು ತೊಡಗಿಸಿಕೊಂಡು ಭಾವನ ಅವರು ಸಿಂಗಲ್ ಆಗಿ ಜೀವನ ನಡೆಸ್ತಿದ್ದಾರೆ.
ಮುಂದುವರೆದ ವೈದ್ಯಕೀಯ ತಂತ್ರಜ್ಷಾನದಲ್ಲಿ ಇದೀಗ ಪುರುಷನ ದೈಹಿಕ ಸಂಪರ್ಕ ಇಲ್ಲದೆ ಅಮ್ಮನಾಗ್ತಿದ್ದಾರೆ ಭಾವರು ಅವ್ರು. ಭಾವನ ಅವ್ರು IVF ಮೂಲಕ ಮಗುವನ್ನು ಪಡೆಯುತ್ತಿದ್ದಾರೆ. ಈ IVF ಅಂದ್ರೆ ಏನು ಅನ್ನೋದು ಏನು ಅಂತಾ ಪ್ರಶ್ನೆ ಮೂಡುತ್ತೆ ? IVF ಅಂದ್ರೆ “ಇನ್-ವಿಟ್ರೋ ಫರ್ಟಿಲೈಸೇಶನ್”(In vitro fertilization) ART ಕಾಯ್ದೆಯ ಪ್ರಕಾರ, IVF ಅಥವಾ ಯಾವುದೇ ART ವಿಧಾನಕ್ಕೆ ಒಳಗಾದ ಒಂಟಿ ಮಹಿಳೆಗೆ ಮಗುವಿನ ಮೇಲೆ ಸಂಪೂರ್ಣ ಪೋಷಕತ್ವ ಹಕ್ಕು ಇರುತ್ತೆ. ವೀರ್ಯ ದಾನಿಗೆ ಮಗುವಿನ ಕುರಿತು ಯಾವುದೇ ಕಾನೂನುಬದ್ಧ ಹಕ್ಕುಗಳು ಅಥವಾ ಹೊಣೆಗಾರಿಕೆ ಇರುವುದಿಲ್ಲ. ಇದರಿಂದ ತಾಯಿ ಮತ್ತು ಮಗುವಿನ ಹಿತಾಸಕ್ತಿಗಳು ರಕ್ಷಿತವಾಗುತ್ತವೆ. ART ಕಾಯ್ದೆಯು ವೀರ್ಯ ದಾನಿಗಳ ಗುರುತು ಸೇರಿದಂತೆ ಫಲವತ್ತತೆ ಚಿಕಿತ್ಸೆಗೆ ಒಳಗಾಗುವ ಮಹಿಳೆಯರ ಗೌಪ್ಯತೆಯನ್ನು ಕಾಯ್ದಿರಿಸುತ್ತದೆ.
ಐವಿಎಫ್ ಮೂಲಕ ಮಗು ಪಡೆಯಲು ಬೇಕಾದ ಅರ್ಹತೆ ನಿಯಮಗಳನ್ನ ನೋಡುವುದಾದರೇ. . ಹೆಚ್ಚಿನ ಚಿಕಿತ್ಸಾಲಯಗಳು, ರೋಗಿಯ ವಯಸ್ಸನ್ನು 21 ರಿಂದ 50 ವರ್ಷದೊಳಗಿರಬೇಕೆಂದು ನಿರ್ಧರಿಸುತ್ತೆ ಭಾರತೀಯ ನಾಗರಿಕರಾಗಿರಬೇಕಾಗುತ್ತದೆ. ಇನ್ನು ಮಹಿಳೆ ವೈದ್ಯಕೀಯವಾಗಿ ದೃಢವಾಗಿರಬೇಕು. ದೈಹಿಕವಾಗಿ ಯಾವುದೇ ಅನಾರೋಗ್ಯ ಸಮಸ್ಯೆಗಳಿರಬಾರದು. ಯಾವುದೇ ವಿಧಾನಕ್ಕೆ ಒಳಗಾಗುವ ಮುನ್ನ ಮಹಿಳೆಯು ತಿಳುವಳಿಕೆಯುಳ್ಳ ಸಮ್ಮತಿ ಅಗತ್ಯವಾಗಿರುತ್ತೆ.ಭಾವನಾತ್ಮಕ ಮತ್ತು ಮಾನಸಿಕ ಅಂಶಗಳ ವಿಚಾರದಲ್ಲಿ ಪೂರ್ವ ಸಮಾಲೋಚನೆ ಶಿಫಾರಸು ಮಾಡಲಾಗುತ್ತದೆ. ಇನ್ನು ವೈದ್ಯಕೀಯ ವಿಧಾನಗಳನ್ನ ನೋಡುವುದಾದ್ರೆ ಐವಿಎಫ್ ಪ್ರಕ್ರಿಯೆಗಳಲ್ಲಿ ಅಂಡಾಣು ಸಂಗ್ರಹಣೆ, ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಫರ್ಟಿಲೈಸೇಶನ್, ಮತ್ತು ಭ್ರೂಣದ ಗರ್ಭಪಾತ್ರ ವರ್ಗಾವಣೆ ಸೇರಿದಂತೆ ಹಲವು ಹಂತಗಳನ್ನ ಒಳಗೊಂಡಿರುತ್ತೆ. ಒಂಟಿ ಮಹಿಳೆಯರು ಸಾಮಾನ್ಯವಾಗಿ ದಾನಿಗಳ ವೀರ್ಯವನ್ನು ಬಳಸಿ ಮಗು ಪಡೆಯುತ್ತಾರೆ.
ಇನ್ನು ಈ ಕುರಿತು ಭಾವನ ಅವರು, ನನ್ನ ತಂದೆ, ಒಡಹುಟ್ಟಿದವರು, ಪ್ರೀತಿಪಾತ್ರರು ಬಹಳ ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪರವಾಗಿ ನಿಂತುಕೊಂಡರು. ಕೆಲವರು ನನ್ನ ನಿರ್ಧಾರವನ್ನು ಪ್ರಶ್ನಿಸಿದರು. ಆದರೆ ನಾನು ಇದಕ್ಕೆ ಸಿದ್ಧವಾಗಿದ್ದೇನೆ ಎಂಬುದು ನನ್ನ ಮನಸ್ಸಿಗೆ ತಿಳಿದಿತ್ತು. ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ತಮ್ಮ ಬಗ್ಗೆ ಹೆಮ್ಮೆ ಆತ್ಮವಿಶ್ವಾಸ ಆಗುವ ರೀತಿಯಲ್ಲಿ ಅವರನ್ನು ಬೆಳೆಸಲಾಗುವುದು. ಬಂಡಾಯದ ಕಾರಣಕ್ಕೆ ನಾನು ಈ ದಾರಿ ಆಯ್ಕೆ ಮಾಡಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸುವ ಸಲುವಾಗಿ ಆಯ್ಕೆ ಮಾಡಿಕೊಂಡೆ. ನನ್ನ ಈ ಕಥೆಯು ಕೇವಲ ಓರ್ವ ಮಹಿಳೆಗೆ ಸ್ಪೂರ್ತಿ ತುಂಬಿದರೂ ಸಾಕು ಶೀಘ್ರದಲ್ಲೇ ಎರಡು ಪುಟ್ಟ ಜೀವಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅದೇ ಸರ್ವಸ್ವ ಎಂದಿದ್ದಾರೆ.