
Ashwaveega News 24×7 ಅ. 26: ಸದನದಲ್ಲಿ RSS ಗೀತೆ ಹಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ತಪ್ಪು ಮಾಡಿದ್ದೇನೆ ಎಂದು ನೀವು ಭಾವಿಸುವುದಾದರೆ, ಎಲ್ಲ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ, ಇಂಡಿ ಒಕ್ಕೂಟದ ನಾಯಕರ ಕ್ಷಮೆ ಕೇಳುತ್ತೇನೆ ಎಂದರು.
ಅಲ್ಲದೆ, ಕಾಂಗ್ರೆಸ್ ಪಕ್ಷದ ಕುರಿತಾದ ತಮ್ಮ ನಿಷ್ಠೆಯನ್ನು ಮತ್ತೆ ಸ್ಪಷ್ಟಪಡಿಸಿದರು. ಅಲ್ಲದೆ, ಹೈಕಮಾಂಡ್ ಆಗಲೀ ಇತರ ಯಾರೂ ತಮ್ಮ ಕ್ಷಮೆ ಕೇಳಿಲ್ಲ ಎಂದರು. ಯಾರ ಮನಸನ್ನೂ ನೋಯಿಸುವ ಉದ್ದೇಶ ತಮಗಿಲ್ಲ ಎಂದೂ ಹೇಳಿದರು.
RSS ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆಶಿ ಕ್ಷಮೆ ಕೇಳಿದ ವಿಚಾರಕ್ಕೆ ಸಂಬಂಧಿಸಿದ್ದಂತೆ ಕಾಂಗ್ರೆಸ್ MLC ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ . ಬೆಂಗಳೂರಿನಲ್ಲಿ ಮಾತನಾಡಿದ ಅವರು . DCM ಆಗಿ ಹೇಳಿದ್ರೆ ತಪ್ಪಿಲ್ಲ, ಅಧ್ಯಕ್ಷರಾಗಿ ಹೇಳಿದ್ರೆ ತಪ್ಪು ಎಂದಿದ್ದೆ.
ಡಿ.ಕೆ.ಶಿವಕುಮಾರ್, ನಾನು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಲ್ಲ. ಸುಮಾರು ದಶಕಗಳ ಹಿಂದೆ ಯಾರೋ ಕಟ್ಟಿದ ಪಕ್ಷ ಇದು.ತ್ರಿವರ್ಣ ಧ್ವಜದ ವಿರುದ್ಧ ಇರುವವರು ಬಿಜೆಪಿ.ನಾನು ಕಾಂಗ್ರೆಸ್ ಕಾರ್ಯಕರ್ತನಾಗಿ ಆ ರೀತಿ ಹೇಳಬಾರದು.K.N.ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡಿಲ್ಲ.ಅವರ ಹೇಳಿಕೆ ತದ್ವಿರುದ್ಧವಾಗಿರಬಹುದು ಎಂದು ಹೇಳಿದ್ರು .
RSS ಗೀತೆ ಹೇಳಿದ್ದಕ್ಕೆ ಡಿಸಿಎಂ ಡಿಕೆಶಿ ಕ್ಷಮೆಯಾಚಸಿದ್ದಕ್ಕೆ ಡಿಕೆ ಶಿವಕುಮಾರ್ಗೆ ಜೆಡಿಎಸ್ ಟಾಂಗ್ ಕೊಟ್ಟಿದೆ . ಉಚ್ಛಾಟನೆಗೆ ಹೆದರಿ ಡಿಸಿಎಂ ಕ್ಷಮೆಯಾಚಿಸಿದರು . ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ. ಉಚ್ಛಾಟನೆಯಿಂದ ಪಾರಾಗಲು ಡಿಕೆಶಿ ಮಂಡಿಯೂರಿ ಕ್ಷಮೆಕೇಳಿದರೆ .
ರಾಜಣ್ಣರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಮಾಡಲಾಯ್ತು. ರಾಜಣ್ಣಗೆ ಕ್ಷಮೆಕೇಳುಲು ಹೈಕಮಾಂಡ್ ಅವಕಾಶ ನೀಡಿಲಿಲ್ಲ. ಕಾಂಗ್ರೆಸ್ನಲ್ಲಿ ದಲಿತರಿಗೊಂದು, ಬಲಾಢ್ಯರಿಗೊಂದು ನ್ಯಾಯ ಎಂದು ಎಕ್ಸ್ ಖಾತೆಯಲ್ಲಿ ಕಾಂಗ್ರಸ್ ವಿರುದ್ದ ಜೆಡಿಎಸ್ ಆಕ್ರೋಶ ಹೊರಹಾಕಿದ್ದಾರೆ .