Ashwaveega News 24×7 ಅ. 26: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಎಸ್ಐಟಿ ಶಾಕ್ ಕೊಟ್ಟಿದ್ದೆ . ಕಳೆದ 6ಗಂಟೆಯಿಂದ ಎಸ್ಐಟಿ ಅಧಿಕಾರಿಗಳು ತಿಮರೋಡಿ ಮನೆಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಇನ್ನೂ ಎಸ್ಐಟಿ ದಾಳಿ ವೇಳೆ ತಿಮರೋಡಿ ಮನೆಯಲ್ಲಿ ಚಿನ್ನಯ್ಯನ ಮೊಬೈಲ್ ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಹಾರ್ಡ್ ಡಿಸ್ಕ್ ಹಾಗೂ ಹಲವು ವಸ್ತುಗಳು ಪತ್ತೆಯಾಗಿದ್ದು,ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ .
ಹೌದು. . .ಧರ್ಮಸ್ಥಳದಲ್ಲಿ ನೂರಾರು ಶವ ಹೋತಿಟ್ಟಿದ್ದೇನೆಂದು ಹೇಳಿ ಕೊಂಡು ಬುರುಡೆ ಬಿಟ್ಟಿದ್ದ ಮಾಸ್ಕ್ಮ್ಯಾನ್ ಅಲಿಯಾಸ್ ಚಿನ್ನಯ್ಯ ನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ . ಇನ್ನೂ ತಿಮರೋಡಿ ಚಿನ್ನಯ್ಯನಿಗೆ ಆಶ್ರಯ ನೀಡಿದ್ರು ಎನ್ನಲಾಗಿದ್ದು , ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಇಂದು ಎಸ್ಐಟಿ ಅಧಿಕಾರಿಗಳೂ ಕಾರ್ಯಚರಣೆ ನಡೆಸಿದ್ರು .
ಈ ವೇಳೆ ಚಿನ್ನಯ್ಯನ ಫೋನ್ ಮತ್ತು ಆತನ ಬಟ್ಟೆಗಳು ಪತ್ತೆಯಾಗಿದೆ ಎನ್ನಲಾಗಿದೆ.ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿರುವ SIT, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಆತನ ಸಹೋದರ ಮೋಹನ್ ಕುಮಾರ್ ಶೆಟ್ಟಿಯ ಮನೆಯಲ್ಲಿ ಸತತ ಶೋಧ ನಡೆಸಿದೆ. ತಿಮರೋಡಿಯ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ನೊಂದಿಗೆ, ಚಿನ್ನಯ್ಯ ವಾಸವಾಗಿದ್ದ ಕೊಠಡಿಯಲ್ಲೂ ತಪಾಸಣೆ ನಡೆಸಲಾಗಿದೆ.
ಇದರ ನಡುವೆ ಸೌಜನ್ಯ ಪರ ಹೋರಾಟಗಾರರ ಮಧ್ಯೆಯೇ ಬಿರುಕು ಮೂಡಿದಂತಿದೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಜೈಲಿಗೆ ಹೋಗಿ ಬಂದ ನಂತರದಿಂದ ಜೊತೆಲಿ ಇರುವವರ ನಡುವೆಯೇ ಬಿರುಕು ಮೂಡಿದೆ.
ಇನ್ನೂ ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ . ಮೊದಲು ಗಿರೀಶ್ ಮಟ್ಟಣ್ಣನವರ್ ಹೊರಗೆ ಹಾಕಿ.. ಎಲ್ಲಾ ಸರಿಹೋಗುತ್ತೆ. ಗಿರೀಶ್ ಮಟ್ಟಣ್ಣನವರ್ ನಿಮ್ಮನ್ನೆಲ್ಲಾ ಹಾಳು ಮಾಡಿದ್ದಾನೆ ಎಂದು ಸೌಜನ್ಯ ಪರ ಹೋರಾಟಗಾರಲ್ಲೇ ಗಿರೀಶ್ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ ಎನ್ನಲಾಗುತ್ತಿದೆ
