Ashwaveega News 24×7 ನವೆಂಬರ್. 23: ಮಟಮಟ ಮಧ್ಯಾಹ್ನವೇ ಸಿಎಮ್ಎಸ್ (CMS) ವಾಹನವನ್ನು ತಡೆದು 7.11 ಕೋಟಿಯನ್ನು ರಾಬರಿ ಮಾಡಿದ್ದ ಗ್ಯಾಂಗ್ನ ಆರೋಪಿಗಳು ಲಾಕ್ ಆಗಿದ್ದಾರೆ. ಇದೀಗ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದು ದರೋಡೆ ಮಾಡಿದ ಹಣವನ್ನು ರಿಕವರಿ ಮಾಡಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರು, ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಈ ದರೋಡೆ ಕೇಸ್ ನಮ್ಮ ಪೊಲೀಸರಿಗೂ ಸವಾಲ್ ಆಗಿತ್ತು. ಆದರೂ ಬೆಂಗಳೂರಲ್ಲಿ ದರೋಡೆ ಆದ ಹಣವನ್ನ ನಮ್ಮ ಪೊಲೀಸ್ ಅಧಿಕಾರಿಗಳು ರಿಕವರಿ ಮಾಡಿದ್ದಾರೆ. ಈ ವರೆಗೆ ಏಳು ಜನ ಅರೆಸ್ಟ್ ಆಗಿದ್ದಾರೆ.
ಅದರಲ್ಲಿ ಒಬ್ಬ ಪೊಲೀಸ್ ಇಲಾಖೆಯ ವ್ಯಕ್ತಿ ಇದ್ದಾನೆ. ಮೂರು ನಾಲ್ಕು ಟೀಮ್ ಮಾಡಿ ನಮ್ಮ ಪೊಲೀಸ್ ಅವರನ್ನ ಬಂದಿಸಿದ್ದಾರೆ. ಮೊದಲಿಗೆ ಪೊಲೀಸ್ ಕಮಿಷನರ್ ಹಾಗೆ ಇಬ್ಬರು ಡಿಸಿಪಿ ಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ. ಬೆಂಗಳೂರಲ್ಲಿ ಹೀಗೆ ಆಗಿದೆ ಅಂದ್ರೆ ಸಹಿಸೋಕೆ ಆಗಲ್ಲ. ಪೋಲೀಸರಿಗೆ ಸವಾಲಾಗುವಂತ ಕೃತ್ಯ ಇದು.
6 ಕೋಟಿ 29 ಲಕ್ಷ ಹಣ ಈಗ ಸಿಕ್ಕಿದೆ. ಉಳಿದ ಹಣದ ಬಗ್ಗೆ ತನಿಖೆ ಆಗ್ತಿದೆ. ತಾಂತ್ರಿಕವಾಗಿ ಹಾಗೂ ಎಚ್ಚರಿಕೆ ಇಂದ ಕೆಲಸ ಮಾಡಿದ್ದಾರೆ.
ಹಣ ತೆಗೆದುಕೊಂಡು ಹೋಗಿದ್ದವರು ಹಾಗೆ ಎಚ್ಚರಿಕೆ ಇಂದ ರಾಬರಿ ಮಾಡಿದ್ರು. ಆರೋಪಿಗಳು ಬಳಸಿದ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಇಲಾಖೆಗೆ ಹಾಗೂ ಸರ್ಕಾರಕ್ಕೆ ಇದರಿಂದ ಒಳ್ಳೆ ಹೆಸರು ಬಂದಿದೆ. ಮುಂದೆ ಇಲಾಖೆಯಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಕೋರಮಂಗಲದಲ್ಲೂ ಒಂದು ಕಿಡ್ನಿಪ್ ಆಗಿದೆ. ಮೊನ್ನೆ ಪೊಲೀಸ್ ಇಲಾಖೆ ಚೆನ್ನಾಗಿ ಕೆಲಸ ಮಾಡ್ತಾರೆ ಅಂತ ಹೇಳ್ತಿದ್ದೆ. ಸಿಎಂಎಸ್ ಸಿಬ್ಬಂದಿ ಅರೆಸ್ಟ್ ಅದರ ಬಗ್ಗೆ ತನಿಖೆ ಆಗ್ತಿದೆ ಎಂದು ತಿಳಿಸಿದ್ದಾರೆ.
