Ashwaveega News 24×7 ನವೆಂಬರ್. 30: ಅಂಬರೀಶ್ ಮತ್ತು ವಿಷ್ಣುವರ್ಧನ್ ನಂತರ ದರ್ಶನ್ ಹಾಗೂ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ದಿಗ್ಗಜರು. ಕುಚುಕುಗಳು ಎನಿಸಿಕೊಂಡಿದ್ದರು.. ಆದರೆ ಹಲವು ವರ್ಷಗಳ ಹಿಂದೆಯೇ ಫ್ಯಾನ್ಸ್ ವಾರ್ ಶುರುವಾಗಿ ಇವರಿಬ್ಬರ ಸ್ನೇಹ ಮುರಿದುಬಿದ್ದಿತ್ತು.
ಒಂದು ದಿನ ದರ್ಶನ್ ಏಕಾಏಕಿ ನನಗೂ ಸುದೀಪ್ ಮಧ್ಯೆ ಯಾವುದೇ ಸ್ನೇಹವಿಲ್ಲ.. ನಾವಿಬ್ಬರೂ ಬರೀ ಚಿತ್ರರಂಗದಲ್ಲಿರುವ ನಟರು ಮಾತ್ರ ಎಂದು ಪೋಸ್ಟ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಒಂದಷ್ಟು ಟ್ವೀಟ್ ವಾರ್ ಬಳಿಕ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿ ಸ್ನೇಹ ಮುರಿದೇ ಹೋಯಿತು. ಆದರೂ ಇವರಿಬ್ಬರೂ ಮತ್ತೆ ಒಂದಾಗುತ್ತಾರೆ ಎಂದು ಕನ್ನಡಾಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ ಅದು ಅಸಾದ್ಯವೆನ್ನಿಸುತ್ತಿದೆ. ಇನ್ನು ದರ್ಶನ್ ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾರೆ. ಈ ನಡುವೆ ದರ್ಶನ್ ಡೆವಿಲ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ಕಿಚ್ಚ ಸುದೀಪ್ ಅವರು ಡೆವಿಲ್ ಸಿನಿಮಾಗೆ ಖಂಡಿತಾ ಒಳ್ಳೆದಾಗಲಿ ಎಂದು ವಿಶ್ ಮಾಡಿದ್ದಾರೆ. ಡಿಸೆಂಬರ್ 12ರ ರಂದು ಡೆವಿಲ್ ಚಿತ್ರ ರಿಲೀಸ್ ಆಗಲಿದೆ.
ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅವರು, ಸೂರ್ಯ ಚಂದ್ರ ಎರಡು ಚೆಂದ. ಅದರೆ ಅವರವರ ಜಾಗದಲ್ಲಿ. ನಾನು ದರ್ಶನ್ ಇಬ್ಬರಿಗೂ 16-18 ವಯಸ್ಸಿನವರಲ್ಲ. ನಾವು ಯಾರೋದೊ ಮಾತು ಕೇಳಿ ಒಂದಾಗಲ್ಲ ಎಂದು ನಟ ಹೇಳಿದ್ದಾರೆ.
ನಾನು ಸಿನಿಮಾರಂಗಕ್ಕೆ ಬರೋ ಮೊದಲು ಎಲ್ಲವನ್ನೂ ಕಲಿತುಕೊಂಡಿದ್ದೇನೆ.
ಆ ರೀತಿನೇ ಕುದುರೆ ಸವಾರಿ ಕೂಡ ಕಲಿತುಕೊಂಡಿದ್ದೇನೆ. ಹೆಚ್ಚು ಕಡಿಮೆ 10 ದಿನ ಅಭ್ಯಾಸ ಕೂಡ ಮಾಡಿದ್ದೇನೆ. ಆದರೆ, ಆ ಒಂದು ದಿನ ಆ ಕುದುರೆ ಅದ್ಯಾಕೋ ರೊಚ್ಚಿಗೆದ್ದೇ ಬಿಡ್ತು. ಅದರಿಂದ ಮೇಲೆ ಕುಳಿತುಕೊಂಡ ನಾನು ಕೆಳಗೆ ಜಾರಿ ಬಿಟ್ಟೆ. ಹಾಗೆ ಆ ಕುದುರೆ ನನ್ನ ಎಳೆದುಕೊಂಡು ಹೋಗಿಯೇ ಬಿಡ್ತು. ಹಾಗಾಗಿಯೇ ಕುದುರೆ ಬಗ್ಗೆ ಹಾಗೂ ಕುದುರೆ ಮೇಲೆ ಕುಳಿತುಕೊಳ್ಳುವುದು ಅಂದ್ರೆ ಭಯ ಆಗುತ್ತದೆ ಅಂತಲೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
