Ashwaveega News 24×7 ಡಿಸೆಂಬರ್. 03: ಸಿಎಂ ಮತ್ತು ಡಿಸಿಎಂ ನಡುವಿನ ಅಧಿಕಾರ ಹಂಚಿಕೆ ಚರ್ಚೆ ಹಾಗೂ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಸಿಎಂ ಆಪ್ತ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಬ್ರೇಕ್ಫಾಸ್ಟ್ ಮೀಟಿಂಗ್ ಬೀಗತನ ಇದ್ದಂಗೆ ಎಂದು ವ್ಯಂಗ್ಯವಾಡಿದ್ದಾರೆ. ಮೊದಲು ಹೆಣ್ಣಿನ ಮನೆಗೆ ಗಂಡಿನ ಕಡೆವರು ಹೋಗ್ತಾರೆ. ಆಮೇಲೆ ಗಂಡಿನ ಮನೆಗೆ ಹೆಣ್ಣಿನ ಕಡೆವರು ಹೋಗ್ತಾರೆ.
ಈ ಬ್ರೇಕ್ಫಾಸ್ಟ್ ಕೂಡ ಅದೇ ರೀತಿ ಆಗಿದೆ ಎಂದು ಲೇವಡಿ ಮಾಡಿದ್ದಾರೆ. ಇರೋದು ಏನಿದಿಯೋ ಅದೇ ಮುಂದುವರಿದುಕೊಂಡು ಹೋಗುತ್ತದೆ.
ಯಾವುದೇ ರಿವರ್ಸ್ ಆಗಲ್ಲ ಎಂದಿದ್ದಾರೆ. ಇದೇ ವೇಳೆ ಅನಿವಾರ್ಯವಾಗಿ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿದ್ರೆ ಪರಮೇಶ್ವರ್ ಸಿಎಂ ಆಗ್ಲಿ ಎನ್ನುವ ಮೂಲಕ ಕುರ್ಚಿ ಕನಸು ಕಾಣ್ತಿರುವ ಡಿಕೆಶಿಗೆ ರಾಜಣ್ಣ ಚೆಕ್ಮೇಟ್ ಇಟ್ಟಿದ್ದಾರೆ.
