Ashwaveega News 24×7 ಜನವರಿ 05 – Mysuru Cylinder Blast : ಹೀಲಿಯಂ ಸ್ಫೋಟದಲ್ಲಿ ಮೃತರಿಗೆ ಪರಿಹಾರ ಘೋಷಣೆ ಬಗ್ಗೆ ನಿಮ್ಮ ಅಶ್ವವೇಗ ನ್ಯೂಸ್ ವರದಿ ಮಾಡಿತ್ತು . ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಬಲೂನ್ ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೀಲಿಯಂ ಸಿಲಿಂಡರ್ ಸ್ಫೋಟಕ್ಕೆ ಮೂವರು ಬಲಿಯಾಗಿದ್ದರು . ಪ್ರಾಣ ಕಳೆದುಕೊಂಡ ಅಮಾಯಕರಿಗೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ . ಮತ್ತು ತವರನ್ನೇ ಮರೆತ್ರಾ ಸಿದ್ದರಾಮಯ್ಯ ಎಂದು ಪ್ರಶ್ನಿಸಿ , ಅಶ್ವವೇಗ ನ್ಯೂಸ್ ವರದಿ ಮಾಡಿತ್ತು .
ಇಂದು ಮೈಸೂರಿನಲ್ಲಿ ಮೃತರಿಗೆ ಸಿಎಂ ಮುಖ್ಯಮಂತ್ರಿ ಸಾವಿಗೆ ಸಂತಾಪ ಸೂಚಿಸಿ ಸರ್ಕಾರದಿಂದ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ …ಈ ಬಗ್ಗೆ ಅಶ್ವವೇಗ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿದೆ …
