Ashwaveega News 24×7 ಜನವರಿ 07 – Rashmika Mandanna – ರಶ್ಮಿಕಾ ಮಂದಣ್ಣಾ ಅವರು ‘ಬಾಕ್ಸ್ ಆಫೀಸ್ ಕ್ವೀನ್’ ಎಂಬ ಬಿರುದನ್ನೂ ಪಡೆದಿದ್ದಾರೆ. ಅವರ ನಟನೆಯ ಆಲ್ಮೋಸ್ಟ್ ಆಲ್ ಸಿನಿಮಾಗಳು ಸಕ್ಸಸ್ ದಾಖಲಿಸಿವೆ.
ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಅವರು ಕೊಡಗು (Kodagu) ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ಆಗಿದ್ದಾರೆ. ದೇಶಾದ್ಯಂತ ಹೆಸರು ಹೊಂದಿರುವ ಅವರು ಕೊಡಗಿನ ಮೂಲಕವೇ ತೆರಿಗೆ ಪಾವತಿಸುತ್ತಿದ್ದಾರೆ. ‘ರಶ್ಮಿಕಾ ಮಂದಣ್ಣ ಎಲ್ಎಲ್ಪಿ’ ಹೆಸರಿನಲ್ಲಿ ಆದಾಯ ತೆರಿಗೆ (Income Tax) ಪಾವತಿ ಮಾಡುತ್ತಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ 3 ಅವಧಿಯಲ್ಲಿ ತೆರಿಗೆ ಪಾವತಿ ಮಾಡಲಾಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿ ಇದ್ದಾರೆ. ಮಾರ್ಚ್ ತಿಂಗಳವರೆಗೆ 4ನೇ ತ್ರೈಮಾಸಿಕ ತೆರಿಗೆ ಪಾವತಿಸಲಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ನಿವಾಸಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂಬ ಸುದ್ದಿ ಕೂಡ ಬಲವಾಗಿದೆ. ವಿಜಯ್ ದೇವರಕೊಂಡ ಜೊತೆ ಅವರು ಮದುವೆ ಆಗಲಿದ್ದಾರೆ ಅನ್ನುವ ಸುದ್ದಿ ಹಬ್ಬಿದೆ …
