Ashwaveega News 24×7 ಜನವರಿ 07 – ಈಗ ಎಲ್ಲೆಡೆ ವಿದ್ಯುಚ್ಛಾಲಿತ ವಾಹನಗಳದೇ ಸದ್ದು, ಅಲ್ವಾ , ಆದರೆ ವಿದ್ಯುತ್ ಉತ್ಪಾದನೆ ಅಗತ್ಯಕ್ಕೆ ತಕ್ಕಷ್ಟು ಆದಲ್ಲಿ ಮಾತ್ರವೇ ಅಲ್ಲವೇ ಈ ವಿದ್ಯುತ್ ವಾಹನಗಳು ಸಂಚರಿಸುವುದು. ನಮ್ಮ ದಿನನಿತ್ಯ ಬಳಕೆಗೆ ವಿದ್ಯುತ್, ಕೈಗಾರಿಕೆಗಳಿಗೆ ವಿದ್ಯುತ್ – ಹೀಗೆ, ವಿದ್ಯುತ್ ನಮಗೆ ಅಪರಿಮಿತವಾಗಿ ಬೇಕಾಗಿದೆ. ಈಗಿರುವ ವಿದ್ಯುತ್ ಉತ್ಪಾದನಾ ತಂತ್ರಜ್ಞಾನ ಅದನ್ನು ಪೂರೈಸುವಷ್ಟು ಸಮರ್ಥವಾಗಿಲ್ಲ ಕಣ್ರೀ…
‘ಕೃತಕ ಸೂರ್ಯ’ ! ಇದು ಅಚ್ಚರಿಯಾದರೂ ನಿಜ. ಹೀಗೊಂದು ಸಂಶೋಧನೆ ಚೀನಾದಲ್ಲಿ ನಡೆದಿದೆ. ಈ ಸಂಶೋಧನೆಯು ಸಮರ್ಥವಾಗಿ ಬಳಕೆಗೆ ಬಂದರೆ, ವಿದ್ಯುತ್ ಉತ್ಪಾದನೆಗಾಗಿ ಈಗಿರುವ ಸಾಕಷ್ಟು ವಿಧಾನಗಳು ಪಕ್ಕಕ್ಕೆ ಸರಿದು, ಸಂಪೂರ್ಣ ಹೊಸ ಅಲೆಯೇ ಸೃಷ್ಟಿಯಾಗುತ್ತದೆ.
ಕೃತಕ ಸೂರ್ಯನ ಬಗ್ಗೆ ಮಾತನಾಡುವ ಮುನ್ನ ನಮ್ಮ ನಿಜವಾದ ಸೂರ್ಯನ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ಶಕ್ತಿಮೂಲವಾದ ಸೂರ್ಯ ನಿಜವಾಗಿಯೂ ಒಂದು ಅತಿ ದೊಡ್ಡ ಒಲೆ ಇದ್ದಂತೆ. ಅದರಲ್ಲಿರುವ ಅಪಾರ ಪ್ರಮಾಣದ ಜಲಜನಕವು ಅಣುವಿದಳನಗೊಂಡು ಶಕ್ತಿ ಉತ್ಪಾದನೆಯಾಗುತ್ತದೆ.

ಸೂರ್ಯನಲ್ಲಿ ಅದೆಷ್ಟು ಪ್ರಮಾಣದ ಜಲಜನಕ ಅನಿಲವಿದೆಯೆಂದರೆ, ಅದು ಖಾಲಿಯಾಗಲು ಇನ್ನೂ ಸಾವಿರಾರು ಕೋಟಿ ವರ್ಷಗಳು ಬೇಕಾಗುವುದು. ಈ ಸಂಶೋಧನೆಯು ಪ್ರತಿಷ್ಠಿತ ‘ನೇಚರ್’ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದ್ದು, ವಿಜ್ಞಾನಿಗಳ ಸಮುದಾಯವು ಕುತೂಹಲ-ಅಚ್ಚರಿಗಳ ಜೊತೆಗೆ ಕಳವಳವನ್ನೂ ವ್ಯಕ್ತಪಡಿಸಿದೆ.
ಚೀನಾದಲ್ಲಿರುವ ‘ಎಕ್ಸ್ ಪರಿಮೆಂಟಲ್ ಅಡ್ವಾನ್ಸಡ್ ಸೂಪರ್ಕಂಡಕ್ಟಿಂಗ್ ಟಾಕ್ಮಾಕ್’ (EAST)ನಲ್ಲಿ ಜಲಜನಕ ಅಣುವಿದಳನ ಪ್ರಕ್ರಿಯೆಯನ್ನು ನಡೆಸಿದ್ದು, ‘ಒತ್ತಡ ರಹಿತ ದಹನ ಕ್ರಿಯೆಯನ್ನು ನಡೆಸಿದ್ದಾರೆ .
ಸಾಮಾನ್ಯವಾಗಿ ಯಾವುದೇ ಅಣುವಿದ್ಯುತ್ ಸ್ಥಾವರದಲ್ಲೂ ಅಣುವಿದಳನ ಪ್ರಕ್ರಿಯೆ ನಡೆಯುವಾದ ಒತ್ತಡ ದಹನ ನಡೆದೇ ನಡೆಯುತ್ತದೆ. ಈ ಶಾಖವನ್ನೇ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಟರ್ಬೈನ್ಗಳನ್ನು ಚಾಲನೆಗೆ ಒಳಪಡಿಸಿ ವಿದ್ಯುತ್ ಉತ್ಪಾದಿಸಿತ್ತದೆ.

ಆದರೆ, ಅಲ್ಲಿ ಉತ್ಪಾದನೆಯಾಗುವ ಒತ್ತಡ ಅಪಾರ ಪ್ರಮಾಣದಲ್ಲಿದ್ದು, ಅದನ್ನು ನಿಯಂತ್ರಿಸಬೇಕಾಗುತ್ತದೆ. ಇಲ್ಲವಾದರೆ, ಚರ್ನೋಬಿಲ್ ಇತ್ಯಾದಿ ಕಡೆಗಳಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಅವಘಡಗಳಾಗುವ ಸಂಭವ ಇರುತ್ತದೆ. ಆದರೆ, ‘ಒತ್ತಡ ರಹಿತ ದಹನ’ ಕ್ರಿಯೆಯಲ್ಲಿ ದಹನ ಆಗುವುದಾದರೂ, ವಿಧಾನ ಬೇರೆ. ಇಲ್ಲಿ ಒತ್ತಡವೇ ಇರುವುದಿಲ್ಲ. ಆದರೆ, ಶಕ್ತಿ ಅಪಾರ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಇದು ಸೂರ್ಯನಲ್ಲಿನ ಶಾಖದ ಮಟ್ಟವನ್ನು ತಲುಪುತ್ತದೆ. ಅದಕ್ಕಾಗಿಯೇ ಇದನ್ನು ‘ಕೃತಕಸೂರ್ಯ’ ಎಂದು ಕರೆದಿರುವುದು. ಜೊತೆಗೆ, ಈ ಪ್ರಕ್ರಿಯೆಲ್ಲಿ ಉತ್ಪಾದನೆಯಾಗುವ ಪ್ಲಾಸ್ಮಾ ನಿಯಂತ್ರಿಸಬಹುದಾದ ಸ್ಥಿತಿಯಲ್ಲಿ ಇರಲಿದ್ದು, ಅದನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಸರಳವಾಗಿ ನಡೆಸಬಹುದು. ಜೊತೆಗೆ, ಅಪಾಯವೂ ಕಡಿಮೆ ಇರುತ್ತದೆ …
