Ashwaveega News 24×7 ಜನವರಿ 08: ನಟ ಯಶ್ ಅವರು ಇಂದು 40ನೇ ಬರ್ತ್ಡೇ ಆಚರಿಸುತ್ತಿದ್ದಾರೆ. ದೇಶ, ಜಗತ್ತು ನೋಡಿದ ರಾಕಿ ಭಾಯ್ ಕನ್ನಡಿಗರಿಗೆ ಎಂದೆಂದೂ ರಾಮಾಚಾರಿ. ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ ನ್ಯಾಷನಲ್ ಸ್ಟಾರ್. ‘ಕೆಜಿಎಫ್ 2’ ರಿಲೀಸ್ ಆದ ದಿನದಿಂದ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಹೆಚ್ಚು ಕಡಿಮೆ ಎರಡು ವರ್ಷ ತೆಗೆದುಕೊಂಡಿದ್ದಾರೆ.
‘ಟಾಕ್ಸಿಕ್’ ರಿಲೀಸ್ ಗೆ ಕೆಲವೇ ದಿನಗಳು ಬಾಕಿಯಿದೆ. ಆದರಿಂದು ಟಾಕ್ಸಿಸ್. ಟೀಸರ್ ರಿಲೀಸ್ ಆಗಿದ್ದು ಮಿಲಿಯನ್ ವಿವ್ಯೂ ಪಡೆದುಕೊಂಡಿದೆ.
ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ‘ಕೆಜಿಎಫ್ 2’ ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮುಂದಿನ ಚಿತ್ರ ಹೇಗಿರುತ್ತೆ ಅನ್ನೋ ಕುತೂಹಲವಿದೆ. ಈ ಬಾರಿ ಯಶ್ ಗ್ಲೋಬಲ್ ಲೆವೆಲ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೆ ಹಾಲಿವುಡ್ ತಂತ್ರಜ್ಞರು ಕೂಡ ‘ಟಾಕ್ಸಿಕ್’ಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಯಶ್ ಅವರ ಸಿನಿ ಪಯಣ ಕಿರುತೆರೆಯಿಂದ ಆರಂಭವಾಯಿತು. ಆರಂಭದಲ್ಲಿ ಅವರು ಪೋಷಕ ಹಾಗೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆ ದಿನಗಳಲ್ಲಿ ಅವರಿಗೆ ದೊಡ್ಡ ಹೆಸರು ಅಥವಾ ಸಂಭಾವನೆ ಇರಲಿಲ್ಲ. ಆದರೆ ನಟನೆಯ ಮೇಲಿನ ನಂಬಿಕೆ ಮತ್ತು ನಿರಂತರ ಪರಿಶ್ರಮ ಅವರನ್ನು ಹಂತ ಹಂತವಾಗಿ ಮೇಲಕ್ಕೆತ್ತಿತು.
ಯಶ್ ಅವರ ಬದುಕಿನಲ್ಲಿ ರಾಧಿಕಾ ಅವರ ಪಾತ್ರ ಬಹಳ ಮುಖ್ಯ. ಮೊಗ್ಗಿನ ಮನಸ್ಸು ಸಿನಿಮಾದ ಸೆಟ್ನಲ್ಲಿ ಆರಂಭವಾದ ಸ್ನೇಹ, ನಂತರ ಪ್ರೀತಿಯಾಗಿ, ದಾಂಪತ್ಯವಾಗಿ ರೂಪುಗೊಂಡಿತು. ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಆಯ್ರಾ ಮತ್ತು ಯಥರ್ವ್ ಎಂಬ ಇಬ್ಬರು ಮಕ್ಕಳು. ಫ್ಯಾಮಿಲಿ ಮಾನ್ ಆಗಿಯೂ ಯಶ್ ಸಕ್ಸಸ್ ಕಂಡಿದ್ದಾರೆ.
