Ashwaveega News 24×7 ಜನವರಿ 9 – ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಡೊಡ್ಡ ಸವಾಲಿನ ಕೆಲಸವಾಗಿದೆ ಅಲ್ವಾ , ಅದರಲ್ಲಿಯೂ ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುವವರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಶೀತ ವಾತಾವರಣ ಚರ್ಮರೋಗಿಗಳು ತಮ್ಮ ದಿನಚರಿಯಲ್ಲಿ ವಿಶೇಷ ಜಾಗ್ರತೆ ವಹಿಸುವುದು ಮುಖ್ಯವಾಗಿರುತ್ತೆ .
ಚಳಿಗಾಲದಲ್ಲಿ ಸ್ನಾನದ ಅಭ್ಯಾಸಗಳು ಚರ್ಮದ ಆರೋಗ್ಯದ ಮೇಲೆ ಪ್ರಮುಖ ಪರಿಣಾಮ ಬೀರುತ್ತವೆ. ಅತಿಯಾಗಿ ಬಿಸಿ ಅಥವಾ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು, ಸ್ನಾನದ ನಂತರ ಚರ್ಮದ ಆರೈಕೆಯನ್ನು ನಿರ್ಲಕ್ಷಿಸುವುರಿಂದ ತುರಿಕೆ ಕಾಣಿಸುತ್ತದೆ .
ಚರ್ಮರೋಗಿಗಳು ಸ್ನಾನ ಮಾಡುವಾಗ ಅನುಸರಿಸಬೇಕಾದ ಸಲಹೆಗಳು:

ಚಳಿಗಾಲದಲ್ಲಿ ಚರ್ಮರೋಗಿಗಳು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು . ತುಂಬಾ ಬಿಸಿ ಅಥವಾ ತಣ್ಣನೆಯ ನೀರು ಚರ್ಮದ ತೇವಾಂಶವನ್ನು ಕಡಿಮೆ ಮಾಡಿ ಸಮಸ್ಯೆಗಳನ್ನು ಕಡಿಮೆಮಾಡುತ್ತೆ . ಸ್ನಾನದ ಅವಧಿಯನ್ನು ಕಡಿಮೆಗೊಳಿಸುವುದು ಸಹ ಅಗತ್ಯ, ಏಕೆಂದರೆ ನೀರಿನಲ್ಲಿ ಹೆಚ್ಚು ಹೊತ್ತು ಇರುವುದರಿಂದ ಚರ್ಮ ಇನ್ನಷ್ಟು ಒಣಗಬಹುದು.
ಸ್ನಾನದ ನಂತರ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮದ ತೇವಾಂಶ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೆ ಸಹಾಯಕವಾಗುತ್ತೆ . ಶೀತ ಗಾಳಿಯಿಂದ ರಕ್ಷಿಸಲು ಹೊರಗೆ ಹೋಗುವಾಗ ಚರ್ಮವನ್ನು ಮುಚ್ಚಿಕೊಳ್ಳಬೇಕು. ಅತಿಯಾದ ಸೋಪು ಮತ್ತು ರಾಸಾಯನಿಕ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು.

ಇದೇ ರೀತಿ ಸಮತೋಲಿತ ಆಹಾರ ಸೇವನೆ ಮತ್ತು ಸಾಕಷ್ಟು ವಿಶ್ರಾಂತಿ ಕೂಡ ಚರ್ಮದ ಆರೋಗ್ಯಕ್ಕೆ ಮಹತ್ವದ್ದಾಗಿದೆ. ಚರ್ಮದ ಸಮಸ್ಯೆಗಳು ಹೆಚ್ಚಾದರೆ ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು …
