Ashwaveega News 24×7 – ಜನವರಿ 11 – ನವದೆಹಲಿ: ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿ (Prime Minister) ಯಾಗುವುದನ್ನು ನೋಡುವುದು ತಮ್ಮ ಕನಸ್ಸೆಂದು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ ಓವೈಸಿ, ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವ ಹಕ್ಕನ್ನು ಖಾತರಿಪಡಿಸುತ್ತದೆ ಅಂತ ಹೇಳಿದ್ದಾರೆ .
ನೀವು ಮುಸ್ಲಿಮರ ವಿರುದ್ಧ ಹರಡುತ್ತಿರುವ ದ್ವೇಷ ಹೆಚ್ಚು ಕಾಲ ಉಳಿಯುವುದಿಲ್ಲ. ದ್ವೇಷ ಹರಡುವವರು ಕೊನೆಗೊಳ್ಳುತ್ತಾರೆ. ಜನರ ಮನಸ್ಸಿನಲ್ಲಿ ಕರುಣೆ, ಸಹಬಾಳ್ವೆ ಜಾಗೃತವಾದಾಗ ದ್ವೇಷ ತಾನಗಿಯೇ ದೂರ ಸರಿಯುತ್ತೆ ಎಂದರು.
ಓವೈಸಿ ಈ ಹೇಳಿಕೆಗಳಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲ, ಹಿಜಾಬ್ದಾರಿ ಮಹಿಳೆ ಭಾರತದ ಪ್ರಧಾನಿಯಾಗುವುದು ತಮ್ಮ ಕನಸ್ಸೆಂದು ಓವೈಸಿ ಹೇಳುತ್ತಾರೆ. ಇದಕ್ಕೆ ಸಂವಿಧಾನದ ಯಾವುದೇ ಅಡ್ಡಿಯಿಲ್ಲ. ಆದರೆ ಮೊದಲು ಹಿಜಾಬ್ ಧರಿಸಿದ ಮಹಿಳೆಯನ್ನು AIMIM ನ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನು ನಿಮಗೆ ಸವಾಲು ಹಾಕುತ್ತೇನೆ ಎಂದು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ….
