Ashwaveega News 24×7 – ಜನವರಿ 11 – ʻಗಿಲ್ಲಿʼ ನಟ ಸದ್ಯ ʻಬಿಗ್ ಬಾಸ್ ಕನ್ನಡ ಸೀಸನ್ 12ʼರ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ.
ʻಬಿಗ್ ಬಾಸ್ʼ ಮನೆಯಲ್ಲಿ, ನಾನು ಕ್ಯಾಮೆರಾ ಕಣ್ಣಿಗೆ ಬೀಳಬೇಕು ಅಂತ ಯಾರು ಅದೆಷ್ಟೇ ಜಗಳ ಮಾಡಿದ್ರು, ಡ್ರಾಮಾ ಮಾಡಿದ್ರು ಅಥವಾ ಲವ್ ಟ್ರ್ಯಾಕ್ ಶುರು ಮಾಡಿದ್ರು, ಇವೆಲ್ಲವನ್ನೂ ಮೀರಿ ಹೈಲೈಟ್ ಆಗ್ತಿರೋದು ಒಂದೇ ಹೆಸರು, ಅದುವೆ ಗಿಲ್ಲಿ! ಹೌದು. ಸಂದರ್ಭ ಎಂಥದ್ದೇ ಇದ್ದರೂ, ತಕ್ಕ ಕಾಮಿಡಿ ಪಂಚ್ ಕೊಡುವ ಗಿಲ್ಲಿನೇ ಈ ಬಾರಿ ಬಿಗ್ ಬಾಸ್ʼನ ಎಂಟರ್ಟೈನರ್ ಅಂತ ವೀಕ್ಷಕರು ಫಿಕ್ಸ್ ಆಗಿಬಿಟ್ಟಿದ್ದಾರೆ. ಅಷ್ಟೇ ಯಾಕೆ ಈ ಬಾರಿ ಟ್ರೋಫಿ ಗೆಲ್ಲೋದು ಕೂಡ ಗಿಲ್ಲಿನೇ ಅನ್ನೋ ಮಾತುಗಳು ಕೂಡ ಜೋರಾಗಿವೆ.
ಗಿಲ್ಲಿ ನಟ ಅವರು ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದೆ. ಈಗ ಅಭಿಮಾನಿಯೋರ್ವ ಟ್ಯಾಟೂ ಹಾಕಿಸಿಕೊಂಡಿದ್ದಾನೆ.. ಮತ್ತು ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಗಿಲ್ಲಿ ಅಭಿಮಾನಿಗಳಿಂದ ಬೆಂಗಳೂರು-ಮಂಡ್ಯ ಬೈಕ್ ರ್ಯಾಲಿ ಮಾಡಿದ್ದಾರೆ …
