Ashwaveega News 24×7 ಜನವರಿ 14 – ಬೆಂಗಳೂರು – Sankranti : ಮಕರ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ. ಹಿಂದೂಗಳು ಪವಿತ್ರ ಹಬ್ಬ ಆಚರಿಸಲು ತಯಾರಿ ನಡೆಸುತ್ತಿದ್ದಾರೆ. ಮಕರ ಸಂಕ್ರಾತಿ, ಪೊಂಗಲ್, ಮಾಘ ಬಿಹು ಸೇರಿದಂತೆ ಹಲವು ರೂಪದಲ್ಲಿ ಹಬ್ಬ ಆಚರಿಸಲಾಗುತ್ತದೆ. ಆದರೆ ಮಕರ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಬಂಗಾರದ ಬೆಲೆ ಏರಿಕೆಯಾಗ ತೊಡಗಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಈಗಾಗಲೇ ದುಬಾರಿಯಾಗಿರುವ ಚಿನ್ನ ಇದೀಗ ಮತ್ತಷ್ಟು ದುಬಾರಿಯಾಗಿದೆ.
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ, ಇದಕ್ಕೆ ಜಾಗತಿಕ ರಾಜಕೀಯ ಉದ್ವಿಗ್ನತೆಗಳು, ಡಾಲರ್ನ ದುರ್ಬಲತೆ, ಮತ್ತು ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುವುದು ಮುಖ್ಯ ಕಾರಣ ವಾಗಿರುತ್ತೆ .. ಕೆಲವು ದಿನಗಳ ಹಿಂದೆ ಬೆಲೆ ಇಳಿಕೆಯಾಗಿದ್ದರೂ, ಹಬ್ಬದ ಮುನ್ನಾ ದಿನಗಳಲ್ಲಿ ಬೆಲೆಗಳು ಮತ್ತೆ ಗರಿಷ್ಠ ಮಟ್ಟ ತಲುಪಿವೆ .
