Ashwaveega News 24×7 ಜನವರಿ 16 -ಬೆಂಗಳೂರು: ಕಾರುಣ್ಯ ರಾಮ್ ಅವರ ತಂಗಿ ಸಮೃದ್ಧಿ ಹಾಗೂ ಇತರರ ವಿರುದ್ಧ ಮತ್ತೊಂದು ದೂರು ದಾಖಲಾಗಿರುವ ವಿಚಾರ ಬೆಳಕಿಗೆ ಬಂದಿದೆ. 2025ರ ಆಗಸ್ಟ್ 11ರಂದು ಕಪಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಕೆಂಗೇರಿ ಪೊಲೀಸರು ಸಮೃದ್ಧಿ ವಿರುದ್ಧ ಎನ್ಸಿಆರ್ (NCR) ದಾಖಲಿಸಿದ್ದಾರೆ.
ದೂರುದಾರ ಕಪಿಲ್ ಅವರ ಹೇಳಿಕೆಯಂತೆ, ಸಮೃದ್ಧಿ ಅವರು ತಮ್ಮ ಬಳಿ ಸುಮಾರು 4 ಲಕ್ಷ ರೂ. ಹಣ ಪಡೆದುಕೊಂಡಿದ್ದು, ಕೇವಲ ಎರಡು ತಿಂಗಳು ಮಾತ್ರ ಸ್ವಲ್ಪ ಮೊತ್ತವನ್ನು ವಾಪಸ್ ನೀಡಿದ್ದಾರೆ. ಉಳಿದ ಹಣ ಕೇಳಿದಾಗ ಪ್ರತಿ ಬಾರಿ ಬೇರೆ ಬೇರೆ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಕಪಿಲ್, ತನ್ನ ಹಣ ವಾಪಸ್ ಪಡೆಯುವ ಉದ್ದೇಶದಿಂದ ಪೊಲೀಸ್ ದೂರು ದಾಖಲಿಸಿದ್ದಾರೆ.
ಇದಲ್ಲದೆ, ಸಮೃದ್ಧಿ ಅವರು ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿರುವುದು ದೂರುನಲ್ಲಿ ಉಲ್ಲೇಖವಾಗಿದೆ. ಕಪಿಲ್ ಅವರು ಸಮೃದ್ಧಿಗೆ ಹಣ ನೀಡಿರುವ ಸಂಬಂಧಿತ ದಾಖಲೆಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿವೆ.
ಒಟ್ಟಾರೆ, ಪ್ರತಿ ದಿನ ಸಮೃದ್ಧಿ ಸಂಬಂಧಿಸಿದ ಹೊಸ ಹೊಸ ವಿಚಾರಗಳು ಬಯಲಾಗುತ್ತಿದ್ದು, ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.
