Ashwaveega News 24×7 ಜನವರಿ 17 – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿನ ತಮ್ಮ ಪ್ರವಾಸವನ್ನು ದಿಢೀರ್ ಆಗಿ ಬದಲಾಯಿಸಿಕೊಂಡು ಬೀದರ್ನತ್ತ ಪ್ರಯಾಣ ಬೆಳೆಸಿದ್ದಾರೆ. ಬೀದರ್ನಲ್ಲಿ ನಡೆಯಲಿರುವ ಹಿರಿಯ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಡಿಕೆಶಿ ದೆಹಲಿಯಿಂದ ನೇರವಾಗಿ ಬೀದರ್ಗೆ ತೆರಳಿದ್ದಾರೆ.
ಇದೇ ವೇಳೆ, ಇಂದು ರಾತ್ರಿ ಮತ್ತೆ ದಿಢೀರ್ ಆಗಿ ದೆಹಲಿಗೆ ತೆರಳುತ್ತಾರೆ ಅಂತ ಸುದ್ದಿ ಕೇಳಿಬಂದಿದೆ .. ಬೀದರ್ನಿಂದಲೇ ನೇರವಾಗಿ ದೆಹಲಿಗೆ ಪ್ರಯಾಣ ಮಾಡುವ ಸಾಧ್ಯತೆ ಇದ್ದು, ದೆಹಲಿಯಲ್ಲೇ ವಾಸ್ತವ್ಯ ಹೂಡುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮಾತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದ ಡಿಕೆ ಶಿವಕುಮಾರ್, ಇಂದು ಕೂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಈ ನಡುವೆ ಅವರ ದಿಢೀರ್ ಪ್ರಯಾಣ ಹಾಗೂ ಮರು ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಡೆಕೆಶಿ ಅವರ ಈ ಚಟುವಟಿಕೆಗಳು ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಕುತೂಹಲ ಮೂಡಿಸಿವೆ.
