Ashwaveega News 24×7 ಜನವರಿ 17 – ಬೆಂಗಳೂರು : ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗುವಂತಹ ಗಂಭೀರ ಆರೋಪಗಳನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಡಿದ್ದಾರೆ. ನಾರಾ ಭರತ್ ಬಗ್ಗೆ ಸ್ಫೋಟಕ ವಿಚಾರಗಳನ್ನು ಹೇಳಿದ್ದಾರೆ .
ಅಶ್ವವೇಗ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, “ಭರತ್ ರೆಡ್ಡಿ ಕುಡಿದ ಅಮಲಿನಲ್ಲಿ ಅಟ್ಯಾಕ್ ಮಾಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಹಲ್ಲೆ ನಡೆಸಿಸುವ ಸಂಸ್ಕೃತಿ ಭರತ್ ರೆಡ್ಡಿಯವರಲ್ಲಿ ಆಳವಾಗಿ ಬೆಳೆದಿದೆ ಎಂದು ಅವರು ಹೇಳಿದ್ದಾರೆ.
ಭರತ್ ರೆಡ್ಡಿಯವರ ಆದೇಶದಿಂದ ಒಬ್ಬ ಕಾರ್ಯಕರ್ತನ ಕೊಲೆ ನಡೆದಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ, ತಮ್ಮದೇ ಪಕ್ಷದ ಕಾರ್ಯಕರ್ತನನ್ನೇ ಬಲಿ ತೆಗೆದುಕೊಳ್ಳಲಾಗಿದೆ ಎಂಬುದು ಅತ್ಯಂತ ಆಘಾತಕಾರಿ ವಿಚಾರ …
ಜನಾರ್ದನ ರೆಡ್ಡಿಯವರ ಹೇಳಿಕೆಯಂತೆ, ಭಯದ ವಾತಾವರಣ ನಿರ್ಮಿಸಿ, ಎದುರಾಳಿಗಳನ್ನು ಮಣಿಸುವುದು ಭರತ್ ರೆಡ್ಡಿಯ ರಾಜಕೀಯ ತಂತ್ರವಾಗಿದೆ. ಪಕ್ಷದೊಳಗಿನ ವಿರೋಧ ಧ್ವನಿಗಳನ್ನು ಮೌನಗೊಳಿಸಲು ಹಿಂಸಾಚಾರಕ್ಕೂ ಹಿಂದೇಟು ಹಾಕಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.
ಈ ಸ್ಫೋಟಕ ಆರೋಪಗಳ ಬಳಿಕ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ನಾರಾ ಭರತ್ ರೆಡ್ಡಿ ಈ ಆರೋಪಗಳಿಗೆ ಯಾವ ರೀತಿಯ ಸ್ಪಷ್ಟನೆ ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
