Ashwaveega News 24×7 ಜನವರಿ 18 – BIG BOSS – ಬೆಂಗಳೂರು: ತಾಳ್ಮೆ, ಸಂಯಮ, ಸಮತೋಲನದ ಮಾತುಗಳಿಂದಲೇ ಹೆಚ್ಚು ಗುರುತಿಸಿಕೊಂಡಿರುವ ಕಿಚ್ಚ ಸುದೀಪ್, ಬಿಗ್ಬಾಸ್ ಪ್ರಿ–ಫಿನಾಲೆ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡ್ರಾ ಎಂಬ ಪ್ರಶ್ನೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ಪರ್ಧಿ ಧ್ರುವಂತ್ಗೆ ನೀಡಿದ “ಚಪ್ಪಾಳೆ” ವಿಚಾರ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಅದಕ್ಕೆ ಕಿಚ್ಚ ನೇರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಿ–ಫಿನಾಲೆ ಎಪಿಸೋಡ್ನಲ್ಲಿ ಸ್ಪರ್ಧಿಗಳ ಆಟವನ್ನು ಗಮನಿಸಿ ಚಪ್ಪಾಳೆ ತಟ್ಟಿದ್ದ ಕಿಚ್ಚನ ನಡೆಗೆ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಈ ಟೀಕೆಗೆ ಕಿಚ್ಚ ಸುದೀಪ್ ಅಸಮಾಧಾನ ಹೊರಹಾಕಿದ್ದು, ಅಭಿಮಾನಿಗಳ ಮೇಲೂ ಕೋಪ ವ್ಯಕ್ತಪಡಿಸಿದ್ರಾ ಎಂಬ ಚರ್ಚೆ ಆರಂಭವಾಗಿದೆ.
“ಧ್ರುವಂತ್ಗೆ ಚಪ್ಪಾಳೆ ಕೊಟ್ಟ ಮೇಲೆ ನಮ್ಮ ಜೀವನ ಏನೇನೋ ಆಗಿದೆ,” ಎಂದು ವ್ಯಂಗ್ಯ ಭರಿತವಾಗಿ ಪ್ರತಿಕ್ರಿಯಿಸಿದ ಕಿಚ್ಚ, “ಸ್ಪರ್ಧಿಗಳ ಆಟ ನೋಡಿಕೊಂಡೇ ನಾವು ಚಪ್ಪಾಳೆ ಕೊಡುತ್ತೇವೆ. ಆದರೆ ಹೊರಗಡೆ ಕೂತು ನಮ್ಮ ಚಪ್ಪಾಳೆಯನ್ನು ಜಾಲಾಡಿ ಬಿಡ್ತಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾಲತಾಣದಲ್ಲಿ ಕಾಲೆಳೆದವರಿಗೆ ಮಾತಿನಲ್ಲೇ ತಿರುಗೇಟು ನೀಡಿದ ಕಿಚ್ಚ,
“ನಾನು ಹೇಳೋದು ಇಷ್ಟೇ… ನಿಮ್ಮ ಜೀವನ ನೋಡಿಕೊಳ್ಳಿ. ಕಿಚ್ಚನ ಚಪ್ಪಾಳೆ ಬಗ್ಗೆ ಅಷ್ಟು ತಲೆಕೆಡಿಸ್ಕೊಳ್ಳಬೇಡಿ,” ಎಂದು ಸ್ಪಷ್ಟ ಸಂದೇಶ ನೀಡಿದರು.
“ಚಪ್ಪಾಳೆ” ಕಾಂಟ್ರವರ್ಸಿಗೆ ಗರಂ ಆದ ಕಿಚ್ಚನ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ. ಕೆಲವರು ಕಿಚ್ಚನ ನೇರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ತಾಳ್ಮೆ ಪಾಠ ಮಾಡುವವರೇ ತಾಳ್ಮೆ ಕಳೆದುಕೊಂಡರಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ, ಒಂದು ಚಪ್ಪಾಳೆಯಿಂದಲೇ ಹುಟ್ಟಿದ ಈ ವಿವಾದ ಬಿಗ್ಬಾಸ್ ಪ್ರಿ–ಫಿನಾಲೆಗೆ ಮತ್ತಷ್ಟು ರಂಗು ತಂದಿದೆ.
