Ashwaveega News 24×7 ಜನವರಿ 18 – ಸೋಷಿಯಲ್ ಮೀಡಿಯಾ ಅಂಗಳದಲ್ಲಿ ಈ ದಿನಗಳಲ್ಲಿ ಒಂದೇ ಹೆಸರು ಭಾರೀ ಸದ್ದು ಮಾಡುತ್ತಿದೆ – ಗಿಲ್ಲಿ ನಟರಾಜ್. ಬಿಗ್ಬಾಸ್ ಕನ್ನಡ ವೇದಿಕೆಯಲ್ಲಿ ಗಿಲ್ಲಿಯ ಆಟ, ಸರಳತೆ ಮತ್ತು ನೈಜತನ ಜನಮನ ಗೆದ್ದಿದ್ದು, ಅದರ ಪ್ರತಿಫಲವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿರುವ ಭಾರೀ ಬೆಂಬಲ.
ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಎಲ್ಲೆಲ್ಲೂ “ಗಿಲ್ಲಿ ಗೆಲ್ಲೋದ್ ಪಕ್ಕ”, “ಡಮಾಲ್ ಡಿಮಿಲ್ ಡಕ್ಕ – ಗಿಲ್ಲಿ ನಂಬರ್ ಒನ್” ಎಂಬ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗುತ್ತಿವೆ. ಅಭಿಮಾನಿಗಳು ರೀಲ್ಸ್, ಪೋಸ್ಟರ್ಗಳು, ಎಡಿಟ್ ವಿಡಿಯೋಗಳು ಹಾಗೂ ಲೈವ್ ವಿಶ್ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷವೆಂದರೆ, ಈ ಬೆಂಬಲ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಹಳ್ಳಿಯಿಂದ ಹಿಡಿದು ಮಹಾನಗರಗಳವರೆಗೂ, ಅಲ್ಲದೆ ದಿಲ್ಲಿವರೆಗೂ ಗಿಲ್ಲಿ ಗೆಲುವಿಗಾಗಿ ಅಭಿಮಾನಿಗಳ ವಿಶ್ ಹರಿದುಬರುತ್ತಿವೆ. ಹಳ್ಳಿಗಳಲ್ಲಿ ಯುವಕರು ಗುಂಪುಗೂಡಿ ಗಿಲ್ಲಿ ಪರ ಘೋಷಣೆ ಕೂಗುತ್ತಿದ್ದರೆ, ನಗರಗಳಲ್ಲಿ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ…
ಗಿಲ್ಲಿಯ ವ್ಯಕ್ತಿತ್ವದಲ್ಲಿರುವ ನೆಲದ ವಾಸನೆ, ನೇರ ಮಾತು, ಯಾರಿಗೂ ಅತಿಯಾದ ನಟನೆಯಿಲ್ಲದ ನಡವಳಿಕೆ ಜನರಿಗೆ ತುಂಬಾ ಹತ್ತಿರವಾಗುತ್ತಿದೆ. ಇದೇ ಕಾರಣಕ್ಕೆ ಮಕ್ಕಳು, ಯುವಕರು, ಹಿರಿಯರು ಎನ್ನದೇ ಎಲ್ಲ ವಯಸ್ಸಿನವರೂ ಗಿಲ್ಲಿಯ ಅಭಿಮಾನಿಗಳಾಗಿದ್ದಾರೆ.
ಒಟ್ಟಾರೆ ಹೇಳಬೇಕೆಂದರೆ, ಬಿಗ್ಬಾಸ್ ಮನೆಯಲ್ಲಿ ಗಿಲ್ಲಿಯ ಆಟ ಎಷ್ಟೇ ಸ್ಟ್ರಾಂಗ್ ಆಗಿದೆಯೋ , ಹೊರಗಡೆ ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಯದ್ದೇ ಹವಾ ಅಷ್ಟೇ ಜೋರಾಗಿದೆ. ಈ ಜನಬೆಂಬಲವೇ ಮುಂದಿನ ದಿನಗಳಲ್ಲಿ ಗಿಲ್ಲಿಗೆ ಗೆಲುವಿನ ಕಾರಣವಾಗುತ್ತ ಅಂತ ಕಾದು ನೋಡಬೇಕಿದೆ.
