Ashwaveega News 24×7 ಜನವರಿ 19 – ಬಿಗ್ಬಾಸ್ ಕನ್ನಡ ಸೀಸನ್ನ ವಿನ್ನರ್ ಗಿಲ್ಲಿ ನಟರಾಜ್ ಗೆಲುವಿನ ಸಂಭ್ರಮದಲ್ಲಿ ತಮ್ಮ ಸಿನಿ ಜೀವನದ ಮಹತ್ವದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗಿನ ಒಡನಾಟವನ್ನು ನೆನೆದು ಗಿಲ್ಲಿ ಭಾವುಕರಾದರು.
ದರ್ಶನ್ ಅಭಿಮಾನಿಗಳ ಮನ ಗೆದ್ದಿರುವ “ಕಾಮಿಡಿ ಕಿಂಗ್” ಗಿಲ್ಲಿ, “ಡೆವಿಲ್” ಸಿನಿಮಾದಲ್ಲಿ ತಮ್ಮ ಪಾತ್ರದ ಮೂಲಕ ಫುಲ್ ಮಿಂಚಿದ್ದರು. ಆ ಸಿನಿಮಾದಲ್ಲಿ ಸಿಕ್ಕ ಅವಕಾಶವನ್ನು ತಮ್ಮ ವೃತ್ತಿ ಬದುಕಿನ ದೊಡ್ಡ ಮೈಲುಗಲ್ಲು ಎಂದು ಗಿಲ್ಲಿ ಹೇಳಿದ್ದಾರೆ.
“ನನ್ನ ಪ್ರಾಪರ್ಟಿ ಕಾಮಿಡಿ ಬಗ್ಗೆ ದರ್ಶನ್ ಸರ್ ಮಾತಾಡಿದ ಕ್ಷಣ ಇನ್ನೂ ನೆನಪಿದೆ. ‘ಹೇಗೋ ಬನ್ ಮೇಲೆ ನೂರು ರೂಪಾಯಿ ಇಟ್ರೆ ಬನ್ನೂರು… ಸಕ್ಕತ್ತಾಗಿ ಮಾತಾಡ್ತೀಯಾ, ಸೂಪರ್ ಕಣೋ’ ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿ ಆಯ್ತು” ಎಂದು ಗಿಲ್ಲಿ ನೆನಪು ಹಂಚಿಕೊಂಡಿದ್ದಾರೆ.
ದರ್ಶನ್ ಅವರ ಮಾತುಗಳು ತಮ್ಮಲ್ಲಿ ಹೊಸ ಭರವಸೆ ಮೂಡಿಸಿತು ಎನ್ನುವ ಗಿಲ್ಲಿ, “ನನ್ನ ಕಾಮಿಡಿನಾ ದೊಡ್ಡ ನಟ ಒಬ್ಬರು ಗುರುತಿಸಿದ್ರಲ್ಲಾ ಅನ್ನೋ ಸಂತೋಷ ಆ ದಿನ ನನಗೆ ದೊಡ್ಡ ಶಕ್ತಿ ಆಯ್ತು” ಎಂದು ಹೇಳಿದ್ದಾರೆ.
ಕಲಾವಿದರನ್ನು ಬೆಳೆಸುವ ಗುಣ ದರ್ಶನ್ ಅವರ ದೊಡ್ಡ ಗುಣವೆಂದು ಪ್ರಶಂಸಿಸಿದ ಗಿಲ್ಲಿ, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಅವರ ಮನಸ್ಸನ್ನು ಹೊಗಳಿದ್ದಾರೆ. ಬಿಗ್ಬಾಸ್ ಗೆಲುವಿನ ನಂತರ ದರ್ಶನ್ ಅವರನ್ನು ಸ್ಮರಿಸಿಕೊಂಡ ಗಿಲ್ಲಿ, ತಮ್ಮ ಯಶಸ್ಸಿನ ಹಿಂದೆ ಹಿರಿಯ ಕಲಾವಿದರ ಆಶೀರ್ವಾದವೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
