Ashwaveega News 24×7 ಜನವರಿ 19 – BIG BOSS – ಬಿಗ್ಬಾಸ್ ಕನ್ನಡ ಸೀಸನ್–12 ಗೆದ್ದಿರುವ “ಕಾಮಿಡಿ ಕಿಂಗ್” ಗಿಲ್ಲಿ ನಟರಾಜ್ ಇದೀಗ ಕೇವಲ ವಿನ್ನರ್ ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡಿಂಗ್ ಸ್ಟಾರ್ ಆಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಇಂಡಿಯಾದಾದ್ಯಂತ ಗಿಲ್ಲಿ ಹೆಸರು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಯದ್ದೇ ಟ್ರೆಂಡಿಂಗ್ ಆಗಿದ್ದು, ಇನ್ಸ್ಟಾಗ್ರಾಂ ಸೇರಿದಂತೆ ಎಲ್ಲಾ ಪ್ರಮುಖ ಜಾಲತಾಣಗಳಲ್ಲಿ “ಗಿಲ್ಲಿ” ಹವಾ ಜೋರಾಗಿದೆ. ಟ್ರೆಂಡಿಂಗ್ ಲಿಸ್ಟ್ನಲ್ಲಿ TOP–1 ಸ್ಥಾನಗಳಲ್ಲಿ ಗಿಲ್ಲಿ ನಟ ಹೆಸರು ಕಾಣಿಸಿಕೊಂಡಿದ್ದು, ಅವರ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಗಿದೆ ಅನ್ನೋದಕ್ಕೆ ಇದುವೇ ಸಾಕ್ಷಿ.
ಬಿಗ್ಬಾಸ್ ಆರಂಭವಾದ ದಿನದಿಂದಲೇ ಗಿಲ್ಲಿ ಹಾವಳಿ ಮನೆಮಾತಾಗಿತ್ತು. ಅವರ ನೈಸರ್ಗಿಕ ಕಾಮಿಡಿ, ಸಿಂಪಲ್ ವ್ಯಕ್ತಿತ್ವ ಮತ್ತು ಮನಮುಟ್ಟುವ ಮಾತುಗಳು ಬಿಗ್ಬಾಸ್ ಫ್ಯಾನ್ಸ್ಗಳನ್ನು ಕರಗಿಸಿವೆ. ಪ್ರತಿದಿನವೂ ಗಿಲ್ಲಿ ಕಾಮಿಡಿ ಕ್ಲಿಪ್ಸ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಬಿಗ್ಬಾಸ್ ವಿನ್ನರ್ ಪಟ್ಟಕ್ಕೇರಿದ ನಂತರ ಗಿಲ್ಲಿಯ ಕ್ರೇಜ್ ಇನ್ನಷ್ಟು ಏರಿಕೆಯಾಗಿದ್ದು, ಫ್ಯಾನ್ಸ್ ಮಾತ್ರವಲ್ಲ ಸಾಮಾನ್ಯ ವೀಕ್ಷಕರೂ “ಗಿಲ್ಲಿ” ಮೇನಿಯಾ ಎಂದು ಹೇಳುವಷ್ಟರ ಮಟ್ಟಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ, ಬಿಗ್ಬಾಸ್ ವಿನ್ನರ್ ಎಂಬ ಹೆಸರಿಗಿಂತಲೂ ಟ್ರೆಂಡಿಂಗ್ ಸ್ಟಾರ್ ಎಂಬ ಗುರುತು ಗಿಲ್ಲಿಗೆ ಸಿಕ್ಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಯದ್ದೇ ಹವಾ ಮುಂದುವರಿದಿದೆ.
