Ashwaveega News 24×7 ಜನವರಿ 19– ನವದೆಹಲಿ : ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿರುವ ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸವಾಗಿರುವ ಐಷಾರಾಮಿ ‘ಆಂಟೀಲಿಯಾ’ ಬಂಗಲೆಯ ಮಾಸಿಕ ವಿದ್ಯುತ್ ಬಿಲ್ ಅಂದಾಜು ₹70 ಲಕ್ಷದಿಂದ ₹80 ಲಕ್ಷದವರೆಗೆ ಇದೆ ಎಂದು ವರದಿಗಳು ತಿಳಿಸಿವೆ .

27 ಅಂತಸ್ತುಗಳನ್ನು ಹೊಂದಿರುವ ಈ ಕಟ್ಟಡವು ಎತ್ತರದ ದೃಷ್ಟಿಯಿಂದ ಸುಮಾರು 60 ಮಹಡಿ ಕಟ್ಟಡದಷ್ಟಿರುವ ಭವ್ಯ ರಚನೆಯಾಗಿದೆ. ಈ ಕಟ್ಟಡದಲ್ಲಿ ಪ್ರತಿ ತಿಂಗಳು ಸರಾಸರಿ 6 ಲಕ್ಷ ಯುನಿಟ್ಗಳಷ್ಟು ವಿದ್ಯುತ್ ಬಳಕೆ ಆಗುತ್ತಿದ್ದು, ಎಲ್ಲ ರಿಯಾಯಿತಿಗಳನ್ನು ಕಡಿತ ಮಾಡಿದ ಬಳಿಕವೂ ಭಾರಿ ಮೊತ್ತದ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆ …

ಆಂಟೀಲಿಯಾ ಬಂಗಲೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ಜಿಮ್, ಸ್ಪಾ, ಖಾಸಗಿ ಚಿತ್ರಮಂದಿರ, ಈಜುಕೊಳ, ದೇವಸ್ಥಾನ, ಮೇಲ್ಮಹಡಿ ಉದ್ಯಾನಗಳು, 150ಕ್ಕೂ ಹೆಚ್ಚು ಕಾರು ನಿಲುಗಡೆ ವ್ಯವಸ್ಥೆ, ಹಾಗೂ ಮೂರು ಹೆಲಿಪ್ಯಾಡ್ಗಳು ಅಸ್ತಿತ್ವದಲ್ಲಿವೆ . ಈ ಭವ್ಯ ಕಟ್ಟಡದ ನಿರ್ಮಾಣಕ್ಕೆ ಸುಮಾರು ₹4,500 ಕೋಟಿ ವೆಚ್ಚವಾಗಿದೆ ಅಂತೆ , ಪ್ರಸ್ತುತ ಇದರ ಮಾರುಕಟ್ಟೆ ಮೌಲ್ಯ ₹15,000 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
