Ashwaveega News 24×7 ಜನವರಿ 20 – ಬೆಂಗಳೂರು : “ಬಿಗ್ಬಾಸ್” ಮನೆಯಿಂದ ಹೊರಬಂದ ಬಳಿಕವೂ ಗಿಲ್ಲಿ ಹಾಗೂ ಅಶ್ವಿನಿಗೌಡ ನಡುವಿನ ವಾಕ್ಸಮರ ಮುಂದುವರಿದಿದೆ. ಕಾರ್ಯಕ್ರಮದ ವೇಳೆ ಗಿಲ್ಲಿ ಬಗ್ಗೆ ಅಶ್ವಿನಿಗೌಡ ನೀಡಿದ್ದ ಹೇಳಿಕೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. “ಬಿಗ್ಬಾಸ್”ನಲ್ಲಿ ಗಿಲ್ಲಿ ಬಡವನ ರೀತಿ ವೇಷ ಹಾಕಿದ್ದ” ಎಂಬ ಅಶ್ವಿನಿಯ ಸ್ಟೇಟ್ಮೆಂಟ್ಗೆ ಗಿಲ್ಲಿಯ ಗೆಳತಿ ಕಾವ್ಯ ಶೈವ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
“ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯಾ…”ಎಂಬ ಭಾವನಾತ್ಮಕ ಸಾಲುಗಳೊಂದಿಗೆ ಪೋಸ್ಟ್ ಹಾಕಿರುವ ಕಾವ್ಯ, ಗಿಲ್ಲಿಯ ಸಾಧನೆಯನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. “ಹೇ.. ಗಿಲ್ಲಿ ಕಂಗ್ರಾಜುಲೇಷನ್ ಕಣೋ. ಝೀರೋದಿಂದ ಹೀರೋ ಆದ ಸಾಧಕ ಗಿಲ್ಲಿ ನಟ” ಎಂದು ಬರೆದು, ಗಿಲ್ಲಿಯ ಗೆಲುವಿಗೆ ಹಾರೈಕೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ, “ಆದಷ್ಟು ಬೇಗ ಗಿಲ್ಲಿ ಆ್ಯಕ್ಷನ್ ಕಟ್ ಹೇಳೋ ಹಾಗೇ ಆಗಲಿ. ತುಂಬಾ ತುಂಬಾ ಒಳ್ಳೆಯದಾಗಲಿ” ಎಂದು ಗಿಲ್ಲಿಯ ಮುಂದಿನ ಸಿನಿ ಭವಿಷ್ಯಕ್ಕೂ ಶುಭಾಶಯ ಕೋರಿದ್ದಾರೆ. ಗಿಲ್ಲಿಗೆ ವಿಶ್ ಮಾಡುತ್ತಲೇ ಅಶ್ವಿನಿಗೌಡಗೆ ಚಮಕ್ ನೀಡಿರುವ ಕಾವ್ಯ ಶೈವ ಅವರ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ…
ಕಾವ್ಯ ಶೈವ ಅವರ ಈ ಪೋಸ್ಟ್ನಿಂದ ಗಿಲ್ಲಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಗಿಲ್ಲಿ ಗೆಲುವಿನ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಆಚರಿಸುತ್ತಿದ್ದಾರೆ. “ಬಿಗ್ಬಾಸ್” ಮುಗಿದರೂ ಅದರ ಪ್ರತಿಧ್ವನಿ ಇನ್ನೂ ಮುಂದುವರಿದಿರುವುದು ಸ್ಪಷ್ಟವಾಗಿದೆ.
