Ashwaveega News 24×7 ಜನವರಿ 20 – ಬೆಂಗಳೂರು: ಮಧ್ಯಮ ವರ್ಗದ ಕೈಗೆಟುಕುತ್ತಿದ್ದ ಚಿನ್ನ ಮತ್ತು ಬೆಳ್ಳಿ ಇದೀಗ ದಿನದಿಂದ ದಿನಕ್ಕೆ ಕೈಗೆ ಸಿಗದ ವಸ್ತುವಾಗುತ್ತಿದೆ. ಗೋಲ್ಡ್ ಮತ್ತು ಸಿಲ್ವರ್ ದರದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದ್ದು, ಜನಸಾಮಾನ್ಯರಿಗೆ ಭಾರೀ ಹೊಡೆತ ನೀಡಿದೆ.
ಇತ್ತೀಚಿನ ದರದ ಪ್ರಕಾರ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 50 ಸಾವಿರ ರೂಪಾಯಿ ತಲುಪಿದೆ. ಕಳೆದ ವರ್ಷ ಇದೇ ಸಮಯದಲ್ಲಿ 70 ಸಾವಿರ ರೂಪಾಯಿ ಇದ್ದ ಗೋಲ್ಡ್ ರೇಟ್, ಒಂದೇ ವರ್ಷದಲ್ಲಿ ದ್ವಿಗುಣದಷ್ಟು ಏರಿಕೆಯಾಗಿದೆ. ನಿನ್ನೆ ಒಂದೇ ದಿನ 1 ಗ್ರಾಂ ಚಿನ್ನದ ದರದಲ್ಲಿ ಸುಮಾರು 2 ಸಾವಿರ ರೂಪಾಯಿ ಹೆಚ್ಚಳ ದಾಖಲಾಗಿದೆ.
ಇನ್ನೊಂದೆಡೆ ಬೆಳ್ಳಿ ಬೆಲೆ ಕೂಡ ದಿನದಿಂದ ದಿನಕ್ಕೆ ಜಿಗಿತ ಕಾಣುತ್ತಿದ್ದು, ಕೆ.ಜಿ. ಬೆಳ್ಳಿ ಬೆಲೆ 3 ಲಕ್ಷ ರೂಪಾಯಿ ಗಡಿ ತಲುಪಿದೆ. ನಿನ್ನೆ ಒಂದೇ ದಿನ ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂಪಾಯಿ ಏರಿಕೆಯಾಗಿದೆ ಅಂತೆ. ಇದರಿಂದ ಆಭರಣ ಖರೀದಿಸುವ ಗ್ರಾಹಕರಿಗೆ ಮಾತ್ರವಲ್ಲ, ಬೆಳ್ಳಿ ಬಳಸುವ ಕೈಗಾರಿಕಾ ವಲಯಕ್ಕೂ ತೀವ್ರ ಒತ್ತಡ ಉಂಟಾಗಿದೆ.
ಚಿನ್ನ ಮತ್ತು ಬೆಳ್ಳಿಯ ಪೂರೈಕೆ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಿಲ್ಲ. ಪೂರೈಕೆ ಕುಸಿತವಾಗಿರುವುದರ ಜೊತೆಗೆ ಬೇಡಿಕೆ ಹೆಚ್ಚಿದ ಕಾರಣ ಬೆಲೆ ಗಗನಕ್ಕೇರಿದೆ. ವಿಶೇಷವಾಗಿ ಕೈಗಾರಿಕಾ ವಲಯದಲ್ಲಿ ಬೆಳ್ಳಿಗೆ ಭಾರಿ ಡಿಮ್ಯಾಂಡ್ ಇದೆ …

ಇದಲ್ಲದೆ, ಹಲವು ದೇಶಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಹೂಡಿಕೆದಾರರ ಸುರಕ್ಷಿತ ಹೂಡಿಕೆ ಮನೋಭಾವವೂ ಚಿನ್ನ–ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿವೆ. ಒಟ್ಟಾರೆ, ಚಿನ್ನ ಮತ್ತು ಬೆಳ್ಳಿ ಮಧ್ಯಮ ವರ್ಗದಿಂದ ದೂರವಾಗುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
