ಬಿರಿಯಾನಿಯಾನ್ನು ಇಷ್ಟ ಪಟದವರೇ ಇಲ್ಲ. ಬಿರಿಯಾನಿ ಹೆಸರು ಕೇಳಿದರೆ ಸಾಕು ಜನರು ಉತ್ಸುವುಕಾರಗಿ ಹೋಟೆಲ್ ಮುಂದೆ ನಿಂತಿರ್ತಾರೆ ಆದ್ರಲ್ಲು 200, 300 ರೂಪಾಯಿ ಇದ್ರೂ ಕೂಡಾ ಕೊಟ್ಟು ಇಷ್ಟಪಟ್ಟು ತಿನ್ನುವ ಬಿರಿಯಾನಿಯನ್ನು ಇನ್ನೂ ಕಮ್ಮಿ ಬೆಲೆಗೆ ಬಿರಿಯಾನಿ ಕೊಡ್ತೀವಿ ಅಂದ್ರೆ ಯಾರು ತಾನೇ ಬಿಡ್ತಾರೆ ಹೇಳಿ ನೋಡೊಣ.
ಅದೇ ರೀತಿ ಇಲ್ಲೊಂದು ಕಡೆ 3 ರೂಪಾಯಿಗೆ ಅನ್ಲಿಮಿಟೆಡ್ ಬಿರಿಯಾನಿ ನೀಡುವುದಾಗಿ ವಿಶೇಷ ಆಫರ್ ಒಂದನ್ನು ನೀಡಲಾಗಿದ್ದು, ಈ ಮೂರು ರೂಪಾಯಿ ಬಿರಿಯಾನಿ ತಿನ್ನಲು ಹೊಟೇಲ್ ಮುಂದೆ ಜನ ಸಾಗರವೇ ಜಮಾಯಿಸಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ. ಕಮ್ಮಿ ಬೆಲೆಗೆ ಬಿರಿಯಾನಿ ಸಿಗುತ್ತೆ ಅಂದ್ರೆ ಈ ಸುರ್ಣಾವಕಾಶವನ್ನು ಯಾರಾದ್ರೂ ಮಿಸ್ ಮಾಡ್ತಾರಾ. ಖಂಡಿತವಾಗಿಯೂ ಇಲ್ಲ.
ಇದೇ ರೀತಿ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಂಡೆನಲ್ಲಿ ಹೊಸ ರೆಸ್ಟೋರೆಂಟ್ ಉದ್ಘಾಟನೆಯ ಪ್ರಯುಕ್ತ ರೆಸ್ಟೋರೆಂಟ್ ಮಾಲೀಕ 3 ರೂಪಾಯಿಗೆ ಅನ್ಲಿಮಿಟೆಡ್ ಕೊಡುವುದಾಗಿ ಬಿಗ್ ಆಫರ್ ಒಂದನ್ನು ನೀಡಿದ್ದು, ಈ ಕಮ್ಮಿ ಬೆಲೆಯ ಭರ್ಜರಿ ಭೋಜನವನ್ನು ಸವಿಯಲು ಬಿರಿಯಾನಿ ಪ್ರಿಯರು ಕ್ಯೂನಲ್ಲಿ ಬಂದಿದ್ದಾರೆ.
ಇದನ್ನೂ ಓದಿ : https://ashwaveega.com/petite-diya-hegde-appeared-in-devi-look/